ಶಾರ್ಜಾ, ಸೆಪ್ಟೆಂಬರ್ 17: ದುಬೈ ಶಾರ್ಜಾದಲ್ಲಿ ಕೇರಳ ಮೂಲದ ಯುವ ವೈದ್ಯೆಯೊಬ್ಬರು ಅಕಾಲಿಕವಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳ ಮೂಲದ ವೈದ್ಯೆ ಅಫೀನಾ ರಹೀಮ್ (32) ದಿಢೀರ್ ಕುಸಿದು ಬಿದ್ದು ಅಕಾಲಿಕವಾಗಿ ನಿಧನರಾಗಿದ್ದಾರೆ.
ಮೃತ ಅಫೀನಾ ರಹೀಮ್ ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರು ಪೂಕುಲಂ ಮೂಲದ ಇಲ್ಲಿಕ್ಕಾಥೋಡಿಕ ಅಬ್ದುರಹ್ಮಾನ್ ಅವರ ಪುತ್ರಿ ಹಾಗೂ ಅಲನೆಲ್ಲೂರ್ ಥೈಯಿಲ್ ಮೂಲದ ಯಾಸಿರ್ ಅವರ ಪತ್ನಿಯಾಗಿದ್ದಾರೆ. ಶಾರ್ಜಾದಲ್ಲಿದ್ದ ವೇಳೆ ಅವರು ಹಠಾತ್ತನೆ ಅಸ್ವಸ್ಥರಾಗಿ ಕುಸಿದುಬಿದ್ದು ದಾರುಣ ಅಂತ್ಯಕಂಡಿದ್ದಾರೆ.
ಅವರ ಮೃತದೇಹವನ್ನು ಸ್ವದೇಶಕ್ಕೆ ಕೊಂಡೊಯ್ಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಯುವ ವೈದ್ಯೆ ಅಫೀನಾಳ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ತೀವ್ರ ಸಂತಾಪ ಸೂಚಿಸಿದ್ದಾರೆ.