BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Crazy lover creates high drama by climbing a mobile tower for love..! ಗಂಗಾವತಿ: ಪ್ರೀತಿಗಾಗಿ ಮೊಬೈಲ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ ಪಾಗಲ್ ಪ್ರೇಮಿ..!


ಗಂಗಾವತಿ,ಸೆಪ್ಟೆಂಬರ್ 01 : ಪ್ರೀತಿ ವಿಚಾರವಾಗಿ ಯುವಕನೊಬ್ಬ ಮೊಬೈಲ್ ಟವರ್ ಹತ್ತಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ರಾಜು ಎಂಬ ವ್ಯಕ್ತಿಯೇ ಪ್ರೀತಿಗಾಗಿ ಈ ರೀತಿ ಟವರ್ ಹತ್ತಿ ನಾನಾ ಹೈಡ್ರಾಮಾ ಸೃಷ್ಟಿಸಿದ ಭೂಪ. ದೇವದುರ್ಗ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವ ಆತ, ಆಕೆಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಟವರ್ ಹತ್ತಿ ಯುತ್ತ ತುದಿ ಏರಿ ಕುಳಿತಿದ್ದ ಯುವಕನನ್ನು ಮನವೊಲಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳ, ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ಕೊನೆಗೆ ಪೊಲೀಸರು ಯುವತಿಯನ್ನು ಸ್ಥಳಕ್ಕೆ ಕರೆಸಿದ ಬಳಿಕವಷ್ಟೇ ಯುವಕ ಟವರ್‌ನಿಂದ ಕೆಳಗಿಳಿದಿದ್ದಾನೆ. ತದನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಇದೇ ವ್ಯಕ್ತಿ ಕೇವಲ ಎರಡು ದಿನಗಳ ಹಿಂದಷ್ಟೇ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಇದೇ ರೀತಿಯಾಗಿ ಮೊಬೈಲ್ ಟವರ್ ಹತ್ತಿ ನಾನಾ ನಾಟಕವಾಡಿದ್ದನು ಎಂಬುದು ತಿಳಿದುಬಂದಿದೆ. ಪ್ರೀತಿಗಾಗಿ ಈ ಯುವಕ ಪದೇ ಪದೇ ಈ ರೀತಿ ಟವರ್ ಹತ್ತುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

https://www.facebook.com/reel/1687043109260380


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!