BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

CPIM Mangaluru ಸರಕಾರಿ ಬಸ್ಸು ಸೌಲಭ್ಯಕ್ಕೆ ಆಗ್ರಹ- ಇರುವೈಲಿನಿಂದ ಕುಪ್ಪೆಪದವು ಸಿಪಿಐಎಂ ಪಾದಯಾತ್ರೆ, ಸರಕಾರಿ ಬಸ್ಸು ಸೌಲಭ್ಯ ನಿರಾಕರಿಸಿದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ




ಮಂಗಳೂರು,ಸೆಪ್ಟೆಂಬರ್ 07 : ಮೂಡುಬಿದಿರೆ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕುಪ್ಪೆಪದವು, ಪುಚ್ಚೆಮುಗೇರು, ಹೊಸಬೆಟ್ಟು ಇರುವೈಲು ಗ್ರಾಮಗಳಿಗೆ ಎಡಪದವು ಮೂಡುಬಿದಿರೆ ಮಾರ್ಗವಾಗಿ ಸರಕಾರಿ ಬಸ್ಸು ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಸಿಪಿಐಎಂ ಗ್ರಾಮ ಸಮಿತಿ ವತಿಯಿಂದ ಇರುವೈಲು ಕೊನ್ನೆಪದವು ಜಂಕ್ಷನ್ ನಿಂದ ಕುಪ್ಪೆಪದವು ಗ್ರಾಮ ಪಂಚಾಯತ್ ಕಚೇರಿ ವರೆಗೆ ಪಾದಯಾತ್ರೆ ನಡೆಯಿತು.

ಕೊನ್ನೆಪದವು ಜಂಕ್ಷನ್ ನಲ್ಲಿ ಪಾದಯಾತ್ರೆಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು.  ಅವರು ಮಾತಾಡುತ್ತಾ,  ಭಾಗದ ಶ್ರಮಿಕರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರ, ಕೃಷಿಯಲ್ಲಿ ತೊಡಗಿಸಿಕೊಂಡಿರುವವರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇರುವೈಲು, ಕುಪ್ಪೆಪದವು, ಪುಚ್ಚೆಮೊಗರು ಮುಂತಾದ ಗ್ರಾಮಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸಮಸ್ಯೆ ತೀವ್ರವಾಗಿದೆ. ಖಾಸಗಿ ಬಸ್ಸುಗಳು ಕಡಿಮೆ ಸಂಖ್ಯೆಯಲ್ಲಿ  ಓಡಾಡುತ್ತಿದ್ದರು ರಾತ್ರೆಯ ಕೊನೆಯ ಟ್ರಿಪ್, ಆದಿತ್ಯವಾರ ಸಹಿತ ರಜಾದಿನಗಳಲ್ಲಿ ಬಸ್ಸುಗಳ ಓಡಾಟ ಸ್ಥಗಿತಗೊಳಿಸಲಾಗುತ್ತದೆ. ಇದರಿಂದಾಗಿ ಈ ಭಾಗದ ಜನತೆ ದುಬಾರಿ ದರ ತೆತ್ತು ಆಟೋಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಉಂಟಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹರ ಸಾಹಸ ಪಡಬೇಕಿದೆ. ಅದಲ್ಲದೆ, ಸರಕಾರದ ಶಕ್ತಿ ಯೋಜನೆ, ಉಚಿತ ಪ್ರಯಾಣದ ಅವಕಾಶದಿಂದ ಈ ಗ್ರಾಮಗಳ ಮಹಿಳೆಯರು, ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಸರಕಾರಿ ಬಸ್ಸು ಸೌಲಭ್ಯ ಒದಗಿಸುವಂತೆ ಎರಡು ವರ್ಷಗಳಿಂದ ಏಳೆಂಟು ಸಲ ಮನವಿ ಸಲ್ಲಿಸಿದರರೂ ಪ್ರಯೋಜನ ಆಗಿಲ್ಲ. ಸ್ಥಳೀಯ ಶಾಸಕರುಗಳು, ರಾಜಕೀಯ ನೇತಾರರು ಖಾಸಗಿ ಬಸ್ಸು ಲಾಬಿಯ ಪರ ನಿಂತಿರುವುದು ಗ್ರಾಮಕ್ಕೆ ಸರಕಾರಿ ಬಸ್ಸು  ಮಂಜೂರಾಗದಂತೆ ತಡೆಯುತ್ತಿದೆ. ಇದರಿಂದಾಗಿ ಸಿಪಿಐಎಂ ಪಕ್ಷ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯುವಂತಾಗಿದ್ದು, ಕುಪ್ಪೆಪದವು, ಇರುವೈಲು ಗ್ರಾಮಗಳಿಗೆ ಸರಕಾರಿ ಬಸ್ಸು ಸೇವೆ ನಿರಾಕರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.‌

ಇರುವೈಲು ಗ್ರಾಮಪಂಚಾಯತ್   ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಿಪಿಐಎಂ ಇರುವೈಲು ಗ್ರಾಮ ಮುಖಂಡ ಶೀನಾ ನಾಯ್ಕ್ ಪ್ರಾಸ್ಥಾವಿಕವಾಗಿ ಮಾತಾಡಿದರು. ಕುಪ್ಪೆಪದವು ಗ್ರಾಮಪಂಚಾಯತ್ ಮುಂಭಾಗ ಪಂಚಾಯತ್ ಪಿಡಿಓ ಅವರಿಗೆ ಮನವಿ ಸಲ್ಲಿಸುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿತು. ಸಮಾರೋಪ ಭಾಷಣವನ್ನು ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವ ದಾಸ್ ಮಾಡಿದರು. ಜಿಲ್ಲಾ ಸಮಿತಿ ವಸಂತಿ ಕುಪ್ಪೆಪದವು ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಿಪಿಐಎಂ ಮುಂದಾಳುಗಳಾದ ಆನಂದ ಪೂಜಾರಿ ಇರುವೈಲು, ರಾಜೇಶ್ ನಾಯ್ಕ್, ಬಾಬು ಪೂಜಾರಿ ಇರುವೈಲು, ಪದ್ಮನಾಭ ಪೂಜಾರಿ, ಕುಸುಮ ಕುಪ್ಪೆಪದವು, ನೋಣಯ್ಯ ಗೌಡ, ಬಾಬು ಸಾಲ್ಯಾನ್ ತಿರುವೈಲು, ಹೊನ್ನಯ ಅಮೀನ್, ಗೋಪಾಲ ಮೂಲ್ಯ,  ಭವಾನಿ, ವಾರಿಜ ಮಂಗುಲ್ಚಾರ್, ಸುಂದರ ನಾಯ್ಕ್ ಮತ್ತಿತರರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!