BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

BJP To CM Dka Shivakumar ಮಂಗಳೂರು : ಕರಾವಳಿಯ ಅಭಿವೃದ್ಧಿಗೆ 44 ಪ್ರಮುಖ ಬೇಡಿಕೆಗಳನ್ನು ಸಿಎಂ ಮುಂದಿರಿಸಿದ ಕರಾವಳಿಯ ಬಿಜೆಪಿ ಶಾಸಕರು ಮುಖಂಡರುಗಳ ನಿಯೋಗ


ಮಂಗಳೂರು,ಸೆಪ್ಟೆಂಬರ್ 13: ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸುತ್ತಿರುವುದನ್ನು ಸ್ವಾಗತಿಸಿರುವ ಭಾರತೀಯ ಜನತಾ ಪಾರ್ಟಿ ಮುಖಂಡರು, ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ 44 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರಮುಖ ಬೇಡಿಕೆಗಳು ಮತ್ತು ಮುಖ್ಯಾಂಶಗಳು:

ಭಾಷೆ ಹಾಗೂ ಸಾಂಸ್ಕೃತಿಕ ಮಾನ್ಯತೆ: ತುಳು ಭಾಷೆಗೆ ಕರ್ನಾಟಕದಲ್ಲಿ ಅಧಿಕೃತ ಎರಡನೇ ಭಾಷೆಯ ಮಾನ್ಯತೆ ನೀಡುವುದು ಹಾಗೂ ತುಳುನಾಡಿನ ದೈವ, ದೇವಾಲಯಗಳ ಪ್ರವಾಸೋದ್ಯಮಕ್ಕೆ (Temple Tourism) ವಿಶೇಷ ಪ್ಯಾಕೇಜ್ ಘೋಷಿಸುವುದು.

ಮೀನುಗಾರಿಕೆ ಹಾಗೂ ಕರಾವಳಿ ರಕ್ಷಣೆ: ಉಳ್ಳಾಲದ ಕಡಲಕೋರೆ ತಡೆಗೆ ಬ್ರೇಕ್ ವಾಟರ್ ಮಾದರಿಯಲ್ಲಿ ಶಾಶ್ವತ ಪರಿಹಾರ, ಉಳ್ಳಾಲದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ, ನೇತ್ರಾವತಿ ಹಾಗೂ ಗುರುಪುರ ನದಿಗಳಲ್ಲಿ ತುರ್ತು ಡ್ರಜ್ಜಿಂಗ್ ಮತ್ತು ಸೀ ಆಂಬುಲೆನ್ಸ್ ಸೇವೆ ಜಾರಿಗೊಳಿಸುವುದು.

ಮರಳು ಮತ್ತು ನಿರ್ಮಾಣ ಸಾಮಗ್ರಿ: ವಿಪರೀತ ಏರಿಕೆಯಾಗಿರುವ ಮರಳು ಹಾಗೂ ಕೆಂಪು ಕಲ್ಲಿನ ದರವನ್ನು ನಿಯಂತ್ರಿಸಲು ಪರವಾನಗಿ ಪ್ರಕ್ರಿಯೆಯನ್ನು ಸರಳೀಕರಿಸುವುದು.

ಆರೋಗ್ಯ ಕ್ಷೇತ್ರ: ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ, ಕನಿಷ್ಠ 250 ಐಸಿಯು ಬೆಡ್‌ಗಳನ್ನು ಸ್ಥಾಪಿಸುವುದು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದು.

ಉದ್ಯೋಗ ಹಾಗೂ ಕೈಗಾರಿಕೆ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಐ.ಟಿ. ಪಾರ್ಕ್ ಘೋಷಣೆ ಹಾಗೂ ಪ್ರತಿ ತಾಲೂಕಿನಲ್ಲಿ 100 ಎಕರೆ ಜಮೀನು ಮೀಸಲಿಟ್ಟು ಕೈಗಾರಿಕಾ ವಲಯ ಸ್ಥಾಪನೆ.

ಕೃಷಿ ಹಾಗೂ ಪರಿಸರ: ಕಸ್ತೂರಿ ರಂಗನ್ ವರದಿಯಲ್ಲಿ ಜನವಸತಿ ಮತ್ತು ಕೃಷಿ ಭೂಮಿಯನ್ನು ಹೊರತುಪಡಿಸಿ ಶೂನ್ಯ (ಝೀರೋ) ಬಫರ್ ಜೋನ್ ಗುರುತಿಸುವುದು. ಸುಳ್ಯ, ಕಡಬ, ಬೆಳ್ತಂಗಡಿ ಭಾಗದಲ್ಲಿ ಕಾಡಾನೆ ಹಾವಳಿ ತಡೆಯಲು ಆನೆ ಕಂದಕ ನಿರ್ಮಾಣ.

ಇತರ ಪ್ರಮುಖ ಆಗ್ರಹಗಳು : ಅಕ್ರಮ ಗೋಹತ್ಯೆ ತಡೆಗೆ ಟಾಸ್ಕ್‌ಫೋರ್ಸ್ ರಚನೆ, ಯಕ್ಷಗಾನ ಪ್ರದರ್ಶನಕ್ಕೆ ಬೆಳಗಿನವರೆಗೆ ಅನುಮತಿ ನೀಡುವುದು, ಕಂಬಳಕ್ಕೆ ಪ್ರೋತ್ಸಾಹಧನ ಹಾಗೂ ವಿಧವಾ ಮತ್ತು ವೃದ್ಧಾಪ್ಯ ವೇತನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವುದು.

ಕರಾವಳಿಯ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಸಂಪುಟ ಸಭೆಯು ಜಿಲ್ಲೆಯ ಜನತೆಗೆ ಉಪಯುಕ್ತವಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!