BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

BJP Mangalore North ಮಂಗಳೂರು ಉತ್ತರ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ



ಮಂಗಳೂರು, ಸೆಪ್ಟೆಂಬರ್ 04:  ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳೂರು ಉತ್ತರ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಗುರುವಾರ ನಡೆಯಿತು. ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತುತ ಕಾನೂನು ಪ್ರಕೋಷ್ಠದ ಅವಶ್ಯಕತೆಯನ್ನು ತಿಳಿಸಿದರು.

ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಪ್ರಸ್ತಾವನೆಗೈದರು. ಮಂಡಲ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿಯವರು ನೂತನ ಸಮಿತಿ ಸದಸ್ಯರನ್ನು ಘೋಷಿಸಿ ಅಭಿನಂದನೆ ಸಲ್ಲಿಸಿದರು.

ಸಂಚಾಲಕರಾಗಿ ಶುಕರಾಜ್ ಎಸ್. ಕೊಟ್ಟಾರಿ,,ಸಹ ಸಂಚಾಲಕರಿಗಾಗಿ ಶಿವರಾಜ್ ಶೆಟ್ಟಿ,ಸದಸ್ಯರುಗಳಾಗಿ ರಾಘವೇಂದ್ರ ಟಿ.ಎನ್., ಸುಜಿತ್ ಕುಮಾರ್, ಶ್ರೀದೇವಿ ಆರ್. ಅಮೀನ್, ಆಕರ್ಶ್, ಕೇದಾರ್ ಶೇನವ ರನ್ನು ಆಯ್ಕೆ ಮಾಡಲಾಯಿತು. 

ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು ರವರು ಪ್ರಕೋಷ್ಠದ ಮಹತ್ವ ಹಾಗೂ ನೂತನ ಸಮಿತಿ ಸದಸ್ಯರ ಜವಾಬ್ದಾರಿಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಮತ್ತು ರಣದೀಪ್ ಕಾಂಚನ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸಂಗೀತ ಆರ್. ನಾಯಕ್, ಕಾನೂನು ಪ್ರಕೋಷ್ಠದ ಜಿಲ್ಲಾ ಸಮಿತಿ ಸದಸ್ಯರಾದ ನರಸಿಂಹ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ವೇಣು ಕುಮಾರ್, ಕುಮಾರಿ ಅಕ್ಷತಾ, ಶಿವರಾಜ್ ಸರಿಪಲ್ಲ ಹಾಜರಿದ್ದರು.

ಶುಕರಾಜ್ ಎಸ್. ಕೊಟ್ಟಾರಿ ಸ್ವಾಗತಿಸಿ, ಕೇದಾರ್ ಶೇನವ ಧನ್ಯವಾದ ಸಲ್ಲಿಸಿದರು. ಆಕರ್ಷ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!