BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Bengaluru Sweltering: Breaks Decade Record with 32.6°C Temperature in September ಸುಡುತ್ತಿದೆ ಬೆಂಗಳೂರು, 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ,ಕಳೆದ 75 ವರ್ಷಗಳಲ್ಲೇ ಸಾರ್ವಕಾಲಿಕ ದಾಖಲೆ ಬರೆದ ತಾಪಮಾನ..!

ಬೆಂಗಳೂರು,ಸೆಪ್ಟೆಂಬರ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿರಬೇಕಾದ ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಬಿಸಿಲಿನ ಬೇಗೆ ಮಾತ್ರ ಜೋರಾಗಿಯೇ ಮುಂದುವರಿದಿದೆ.

ಶನಿವಾರ (ಸೆಪ್ಟೆಂಬರ್ 12, 2026) ಬೆಂಗಳೂರು ನಗರ ಹವಾಮಾನ ಕೇಂದ್ರದಲ್ಲಿ ಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ಒಂದು ದಶಕದಲ್ಲೇ ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವಾಗಿದೆ.

ಹೊರವಲಯದಲ್ಲಿ ತೀವ್ರ ಬಿಸಿಲು: ನಗರದ ಹೊರವಲಯದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹವಾಮಾನ ಕೇಂದ್ರದಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಿದ್ದು, ಬರೋಬ್ಬರಿ 33.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

75 ವರ್ಷಗಳ ಗರಿಷ್ಠ ಮಟ್ಟ: ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, 1951ರ ನಂತರ ಅಂದರೆ ಕಳೆದ 75 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ಭಾಗದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶ ಇದಾಗಿದೆ. ಈ ಹಿಂದೆ 1951ರ ಸೆಪ್ಟೆಂಬರ್ 16ರಂದು ಇಷ್ಟೇ ಪ್ರಮಾಣದ ಗರಿಷ್ಠ ತಾಪಮಾನ ದಾಖಲಾಗಿತ್ತು.

ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ರಿಂದ 32 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ (IMD) ಅಧಿಕಾರಿಗಳು ತಿಳಿಸಿದ್ದಾರೆ.


ಋತುಮಾನಕ್ಕೆ ಅನುಗುಣವಾಗಿ ಬೀಸಬೇಕಿದ್ದ ನೈಋತ್ಯ ಮಾರುತಗಳ ಬದಲಿಗೆ ಮೇಲ್ಮೈ ಮಟ್ಟದಲ್ಲಿ ವಾಯವ್ಯ ಮಾರುತಗಳು ಬೀಸುತ್ತಿವೆ. ಮೋಡಗಳ ಕೊರತೆ ಹಾಗೂ ದುರ್ಬಲ ಮುಂಗಾರು ಮಳೆಯಿಂದಾಗಿ ತಾಪಮಾನದಲ್ಲಿ ಏರಿಕೆಯಾಗಿದೆ ಎಂದು ಐಎಂಡಿ ಬೆಂಗಳೂರು ಪ್ರಭಾರ ನಿರ್ದೇಶಕ ಎನ್. ಪುವಿಯರಸನ್ ವಿವರಿಸಿದ್ದಾರೆ. ಮೇಲ್ಮೈಯಲ್ಲಿ ಬೀಸುತ್ತಿರುವ ಗಾಳಿ ಒಣಗಿದ್ದು ತೇವಾಂಶವನ್ನು ಹೊಂದಿಲ್ಲದಿರುವುದರಿಂದ, ವಿಶೇಷವಾಗಿ ಕರ್ನಾಟಕದ ದಕ್ಷಿಣ ಭಾಗ ಮತ್ತು ಒಳನಾಡು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!