ಆನಂದಪುರ,ಸೆ21 : ಆನಂದಪುರ-ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಬಳಿ ಸೋಮವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಓರ್ವ ಸವಾರನ ಸ್ಥಿತಿ ಗಂಭೀರವಾಗಿರುವ ದಾರುಣ ಘಟನೆ ವರದಿಯಾಗಿದೆ.
ಘಟನೆಯ ವಿವರ:
ಆನಂದಪುರದಿಂದ ಗೌತಮಪುರ ಮಾರ್ಗವಾಗಿ ಹಿರೇ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್ (ಈಶ್ವರ ಗೌಡ) ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಮೊಹಮ್ಮದ್ ಸಿದ್ದಿಕ್ (ರಾಜೀವುಲ್ಲಾ) ಅವರ ಬೈಕ್‌ಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಹೊಡೆದಿವೆ.
ಅಪಘಾತದ ತೀವ್ರತೆಗೆ ಮೊಹಮ್ಮದ್ ಸಿದ್ದಿಕ್ ಅವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಅವರನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಮತ್ತೋರ್ವ ಸವಾರ ತೀರ್ಥೇಶ್ ಅವರಿಗೂ ಸಹ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.