BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Abuti Vellil was executed in Dammam ದಮಾಮ್: ಸೌದಿ ಅರೇಬಿಯಾದಲ್ಲಿ ಮಾದಕವದ್ರವ್ಯ ಸಾಗಾಟ ಯತ್ನ: ಕೇರಳ ಮೂಲದ ಯುವಕನಿಗೆ ಮರಣದಂಡನೆ ಜಾರಿ


ದಮಾಮ್, ಸೆ 29: ಸೌದಿ ಅರೇಬಿಯಾಕ್ಕೆ ದೊಡ್ಡ ಪ್ರಮಾಣದಲ್ಲಿ ಮಾದಕವದ್ರವ್ಯ ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ, ಕೇರಳದ ತಲಸ್ಸೆರಿಯ ಮಾಹೆಯ ಪೆರಿಂಗಡಿಯವರಾದ ಮಲಯಾಳಿ ವ್ಯಕ್ತಿ ಅಬುಟಿ ವೆಲ್ಲಿಲ್ (41) ಅವರ ಮರಣದಂಡನೆಯನ್ನು ದಮಾಮ್‌ನಲ್ಲಿ ಭಾನುವಾರದಂದು ಬೆಳಿಗ್ಗೆ ನೆರವೇರಿಸಲಾಗಿದೆ. ಮರದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಸೌದಿ ಆಂತರಿಕ ಸಚಿವಾಲಯವು ಅಧಿಕೃತವಾಗಿ ಘೋಷಿಸಿ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದೆ.

2023ರಲ್ಲಿ ಒಮಾನ್‌ನಿಂದ ಸೌದಿ ಅರೇಬಿಯಾಕ್ಕೆ ರಸ್ತೆ ಮಾರ್ಗವಾಗಿ ಗಡಿ ದಾಟುತ್ತಿದ್ದ ಲ್ಯಾಂಡ್ ಕ್ರೂಸರ್ ಕಾರೊಂದನ್ನು ಭದ್ರತಾ ಪಡೆಗಳು ತಪಾಸಣೆ ನಡೆಸಿದಾಗ, ಅದರ ಇಂಧನ ಟ್ಯಾಂಕ್‌ನಿಂದ ಸುಮಾರು 43 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಂಡಿದ್ದಾಗಿ ಕುಟುಂಬದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಕಾರಿನ ಚಾಲಕರಾಗಿದ್ದ ಅಬುಟಿಯನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ, ಮತ್ತೊಬ್ಬ ವ್ಯಕ್ತಿ ತನಗೆ ಒಂದು ಪಾರ್ಸೆಲ್ ನೀಡಿದ್ದಾನೆ ಹಾಗೂ ಅದರೊಳಗೆ ಮಾದಕ ವಸ್ತುಗಳಿರುವುದು ತನಗೆ ತಿಳಿದಿರಲಿಲ್ಲ ಎಂದು ಅಬುಟಿ ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಹೇಳಿದ್ದರು. ಆದರೆ ಅವರ ಈ ಹೇಳಿಕೆಯನ್ನು ಸ್ವೀಕರಿಸಲಾಗಲಿಲ್ಲ ಎನ್ಲಾಗಿದ್ದೆ ಕಾರಣ ಮಾದಕ ವಸ್ತು ಪತ್ತೆಯಾದ ಕಾರು ಅಬುಟಿ ಹೆಸರಿನಲ್ಲಿತ್ತು.

ನಂತರದ ಕಾನೂನು ಪ್ರಕ್ರಿಯೆಯಲ್ಲಿ, ವಿಚಾರಣಾ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿತು. ಈ ಮರಣದಂಡನೆಯನ್ನು ನಂತರ ಮೇಲ್ಮನವಿ ನ್ಯಾಯಾಲಯವು ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್‌ನ ಅನುಮೋದನೆಯ ನಂತರ, ಸೌದಿ ದೊರೆಯಿಂದ ರಾಜಮನೆತನದ ಆಜ್ಞೆಯನ್ನು (ರಾಯಲ್ ಡಿಕ್ರಿ) ಹೊರಡಿಸಲಾಯಿತು. ಸೌದಿ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ ವಿವರಗಳ ಪ್ರಕಾರ, ಇದರ ನಂತರ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ವಿಚಾರಣಾ ನ್ಯಾಯಾಲಯವು ವಿಧಿಸಿ ಮತ್ತು ಮೇಲ್ಮನವಿ ನ್ಯಾಯಾಲಯವು ಎತ್ತಿಹಿಡಿದಿದ್ದ ಮರಣದಂಡನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿ, ರಾಜಮನೆತನದ ಆಜ್ಞೆ ಹೊರಬಿದ್ದ ನಂತರ ಮಾಹೆಯ ಪೆರಿಂಗಡಿಯ 41 ವರ್ಷದ ನಿವಾಸಿ ಅಬುಟಿ ವೆಲ್ಲಿಲ್ ಅವರನ್ನು ದಮಾಮ್‌ನಲ್ಲಿ ಗಲ್ಲಿಗೇರಿಸಲಾಗಿದೆ. 

ನನ್ನ ಮಗ ನಿರಪರಾಧಿ:

 ಆದರೆ ಆರ್ಥಿಕವಾಗಿ ಹಿಂದುಳಿದಿದ್ದ ಅಬುಟಿಗೆ ಸೌದಿ ಅರೇಬಿಯಾ ಅಥವಾ ಕೊಲ್ಲಿ ರಾಷ್ಟ್ರಗಳಲ್ಲಿ ಸ್ವಂತ ಕಾರು ಇರಲಿಲ್ಲ. ಈ ವಿಚಾರದಲ್ಲಿಯೂ ಅಬುಟಿಗೆ ಮೋಸ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ತಮ್ಮ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪ್ರಕರಣದ ಹಿಂದಿರುವ ಸತ್ಯ ಹೊರಬರಬೇಕು ಎಂದು ಕುಟುಂಬ ಒತ್ತಾಯಿಸಿದೆ. ಈ ಸಂಬಂಧ ಅಬುಟಿಯ ತಾಯಿ ಶಾಹಿದಾ, ಪತ್ನಿ ಹಾಗೂ ಸಹೋದರಿಯರಾದ ಶಕೀಲಾ, ಸಫೀಮ್ ಮತ್ತು ಸಮೀರಾ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಶೆರ್ರಿ ವಿಪುಲ್ ಅವರನ್ನು ಸಂಪರ್ಕಿಸಿದ್ದಾರೆ. ಅಬುಟಿ ನಿರಪರಾಧಿಯಾಗಿದ್ದು, ಮೋಸದ ಮೂಲಕ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟಿದ್ದಾರೆ ಎಂಬುದು ಕುಟುಂಬದ ಆರೋಪವಾಗಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!