ಬ್ಯಾಂಕಾಕ್, ಸೆಪ್ಟೆಂಬರ್15: ಖಾಸಗಿ ಮೀನು ಕೊಳಕ್ಕೆ ಅತಿಕ್ರಮವಾಗಿ ಪ್ರವೇಶಿಸಿ, ಬೆಲೆಬಾಳುವ ಕೋಯಿ (Koi) ಮೀನುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಆರೋಪದ ಮೇಲೆ 51 ವರ್ಷದ ವ್ಯಕ್ತಿಯೊಬ್ಬನನ್ನು ಥಾಯ್ಲೆಂಡ್ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 7ರ ರಾತ್ರಿ ಬ್ಯಾಂಕ್‌ಕಾಕ್‌ನ ಸೋಯಿ ವಿಭಾವಡಿ ರಂಗಸಿತ್ 66 ಪ್ರದೇಶದಲ್ಲಿರುವ ನಿವಾಸಿಯೊಬ್ಬರ ಮನೆಯ ಹೊರಭಾಗದ ಮೀನು ಕೊಳದಲ್ಲಿ ಈ ಕೃತ್ಯ ನಡೆದಿದೆ.
ಘಟನೆಯ ಹಿನ್ನೆಲೆ:
ರಾತ್ರಿ ವೇಳೆ ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮೀನು ಕೊಳದ ಬಳಿ ಸಂಚರಿಸಿ, ಕೊಳದಲ್ಲಿದ್ದ ಕೋಯಿ ಮೀನನ್ನು ಹಿಡಿದು ಅಶ್ಲೀಲ ಕೃತ್ಯ ಎಸಗಿರುವುದು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಮಾಲೀಕರು ಮತ್ತು ಮನೆಕೆಲಸದಾಕೆ ಆತನನ್ನು ಹಿಡಿಯಲು ಯತ್ನಿಸಿದಾದರೂ, ಆತ ಸೈಕಲ್‌ನಲ್ಲಿ ಪರಾರಿಯಾಗಿದ್ದನು. ಈ ಕುರಿತು ತುಂಗ್ ಸಾಂಗ್ ಹಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಕೊಳದಲ್ಲಿದ್ದ ಕೋಯಿ ಮೀನುಗಳು ಒಂದೊಂದಾಗಿ ಸಾಯಲು ಆರಂಭಿಸಿದ ಬಳಿಕ ಮನೆಯ ಮಾಲೀಕರಿಗೆ ಅನುಮಾನ ಮೂಡಿದೆ. ಸತ್ತ ಮೀನುಗಳ ದೇಹವು ಅಸಹಜವಾಗಿ ಬಾಗಿರುವುದನ್ನು ಗಮನಿಸಿದ ಅವರು, ತಕ್ಷಣ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕರಾಳ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಸೈಕಲ್‌ನಲ್ಲಿ ಪರಾರಿಯಾಗಿದ್ದರಿಂದ ಆತ ಸ್ಥಳೀಯರೇ ಆಗಿರಬಹುದು ಎಂದು ಶಂಕಿಸಿದ ಪೊಲೀಸರು ಬಲೆ ಬೀಸಿದ್ದರು. ಅದರಂತೆ, ಸೆಪ್ಟೆಂಬರ್ 10ರಂದು ಸಿಯಾಂಗ್ ಕಾಂಗ್ ಲಕ್ ಸಿ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಸುಚಿತ್ ಚಾಯ್ ಎಂದು ಗುರುತಿಸಲಾಗಿದೆ. ವಿಶೇಷವೆಂದರೆ, ಆತ ಕೃತ್ಯ ಎಸಗುವಾಗ ಧರಿಸಿದ್ದ ಬಟ್ಟೆಯನ್ನೇ ಬಂಧನದ ವೇಳೆಯೂ ಧರಿಸಿದ್ದನು. ಪೊಲೀಸರ ತೀವ್ರ ವಿಚಾರಣೆ ವೇಳೆ ಸಿಸಿಟಿವಿ ದೃಶ್ಯಾವಳಿಯಲ್ಲಿರುವುದು ತಾನೇ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ, ಆಸ್ತಿ ಹಾನಿ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ ಹಾಗೂ ಅತಿಕ್ರಮಣ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳಡಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದು, ತನಿಖೆ ಮುಂದುವರಿದಿದೆ.