BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

"Worker dies after being hit by a moving train" ಹಳೆಯಂಗಡಿ: ಚಲಿಸುತ್ತಿದ್ದ ರೈಲು ಬಡಿದು ಕಾರ್ಮಿಕ ಸಾವು..!


ಹಳೆಯಂಗಡಿ, ಆಗಸ್ಟ್ 31 : ಮಂಗಳೂರು ಹೊರವಲಯದ ಹಳೆಯಂಗಡಿ ಇಂದಿರಾನಗರ ರೈಲ್ವೆ ಗೇಟ್ ಬಳಿ ರೈಲು ಚಲಿಸುತ್ತಿರುವಾಗಲೇ ಗೇಟ್ ದಾಟಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರು ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿಯನ್ನು ಒರಿಸ್ಸಾ ಮೂಲದ, ತೋಕುರು ಸಮೀಪದ ಫ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಜಗ (40 ವರ್ಷ) ಎಂದು ಗುರುತಿಸಲಾಗಿದೆ. ಹಳೆಯಂಗಡಿ ಪೇಟೆಯಿಂದ ಇಂದಿರಾನಗರ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು, ರೈಲು ಚಲಿಸುತ್ತಿದ್ದರೂ ಲೆಕ್ಕಿಸದೆ ರೈಲ್ವೆ ಗೇಟ್ ಬಳಿ ಹಳಿ ದಾಟಲು ಮುಂದಾಗಿದ್ದರು.

ಸಾರ್ವಜನಿಕರು ಎಷ್ಟು ಬೊಬ್ಬೆ ಹಾಕಿದರೂ ಕೇಳಿಸಿಕೊಳ್ಳದೆ ರೈಲಿನ ಹಳಿಯತ್ತಲೇ ಹೋಗುತ್ತಿದ್ದ ಇಬ್ಬರ ಪೈಕಿ ಓರ್ವರಿಗೆ ರೈಲು ಬಡಿದು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಈ ಅಪಘಾತದ ಹಿನ್ನೆಲೆಯಲ್ಲಿ ಕೆಲವು ಹೊತ್ತು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಮುಲ್ಕಿ ಠಾಣಾ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!