Woman Missing ಮೂಡಬಿದಿರೆಯಲ್ಲಿ ವಿವಾಹಿತ ಮಹಿಳೆ ನಾಪತ್ತೆ, ದೂರು ದಾಖಲು
ಸುದ್ದಿವಾಣಿ
8/05/2026 10:11:00 AM
ಮೂಡುಬಿದಿರೆ,ಆಗಸ್ಟ್ 05 : ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ವಿವಾಹಿತ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾರೆ. ಸಬೀರ ಬಾನು (20) ನಾಪತ್ತೆಯಾದ ಮಹಿಳೆಯಾಗಿದ್ದು ಶಿವಮೊಗ್ಗದಿಂದ ಮೂಡುಬಿದಿರೆಯ ತನ್ನ ಅಕ್ಕನ ಮನೆಗೆ ಬಂದಿದ್ದಳು. ಆದ್ರೆ ಅಲ್ಲಿಂದ ತನ್ನ ಗಂಡನ ಮನೆಗೆ ಮರಳಿ ಹೋಗದೆ ಏಕಾಎಕಿ ನಾಪತ್ತೆಯಾಗಿದ್ದಾರೆ. ಮೂಡುಬಿದಿರೆ ತಾಲೂಕಿನ ನೆಲ್ಲಿಕಾರಿನವರಾದ ಸಬೀರ ಬಾನು ಅವರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಶ್ಫಾಕ್ ಎಂಬವರಿಗೆ ಎರಡು ವರ್ಷಗಳ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ನಂತರ ಮೂಡುಬಿದಿರೆ ಸಮೀಪದಲ್ಲಿರುವ ತನ್ನ ಅಕ್ಕನ ಮನೆಗೆ ಸಬೀರ ಬಂದು ಹೋಗುತ್ತಿದ್ದರು. ಜುಲೈ 27ರಂದು ಅಕ್ಕ ತನ್ನ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಬರುವಷ್ಟರಲ್ಲಿ ಸಬೀರಾ ಬಾನು ಮನೆಯಲ್ಲಿರಲಿಲ್ಲ. ಇದರಿಂದ ಗಾಬರಿಗೊಂಡ ಅಕ್ಕ ಸಂಬಂಧಿಕರ ಮನೆಗೆ, ಗಂಡನ ಮನೆಗೆ ಕಾಲ್ ಮಾಡಿ ವಿಚಾರಿಸಿದರೂ ಪತ್ತೆಯಿಲ್ಲ. ಬಳಿಕ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಟ್ಯಾಗ್ಗಳು:
ದಕ್ಷಿಣ ಕನ್ನಡ