BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Wild buffalo ಮಂಗಳೂರು ಹೊರವಲಯ ನೀರುಮಾರ್ಗದಲ್ಲಿ ಹಾಡುಹಗಲೇ ಕಾಡುಕೋಣ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕದ ವಾತಾವರಣ


ಮಂಗಳೂರು, ಆಗಸ್ಟ್ 13 :ಮಂಗಳೂರು ನಗರದ ಹೊರವಲಯದ ನೀರುಮಾರ್ಗದಲ್ಲಿ ಹಾಡುಹಗಲೇ ಕಾಡುಕೋಣವೊಂದು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಭಯಭೀತರಾಗಿದ್ದಾರೆ. ನೀರುಮಾರ್ಗದ ಹೋಲಿಕ್ರಾಸ್ ರಸ್ತೆಯ ಜೋಸೆಫ್ ಎಂಬವರ ಮನೆಯ ಹಿತ್ತಲಿನಲ್ಲಿ ಗುರುವಾರ ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಈ ಕಾಡುಕೋಣದ ಸಂಚಾರ ಸ್ಪಷ್ಟವಾಗಿ ಕಂಡುಬಂದಿದೆ.

ಮನೆಯ ಗಡಿಯುದ್ದಕ್ಕೂ ನಿರ್ಮಿಸಲಾಗಿದ್ದ ಕಂಪೌಂಡ್ ಅನ್ನು ದಾಟಿ ಒಳ ನುಗ್ಗಿದ ದೈತ್ಯ ಕಾಡುಕೋಣ, ಕೆಲಕಾಲ ಅತ್ತಿಂದಿತ್ತ ಓಡಾಡಿ ಬಳಿಕ ಹಿತ್ತಲು ದಾಟಿ ಕಾಡಿನ ಕಡೆಗೆ ಅಥವಾ ಜನಸಂಚಾರವಿಲ್ಲದ ನಿರ್ಜನ ಪ್ರದೇಶಕ್ಕೆ ಕಣ್ಮರೆಯಾಗಿದೆ. ಕಾಡುಕೋಣವು ಮನೆಯ ಹಿತ್ತಲಿನಲ್ಲಿ ನಿರಾತಂಕವಾಗಿ ಸಂಚರಿಸಿದ ದೃಶ್ಯಗಳು ಸ್ಥಳೀಯರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸ್ಥಳೀಯರ ವಲಯದಲ್ಲಿ ವೈರಲ್ ಆಗಿದೆ.

ಕೃಷಿ ಚಟುವಟಿಕೆಗಳು ಹಾಗೂ ತೋಟಗಳೇ ಹೆಚ್ಚಾಗಿರುವ ಈ ಗ್ರಾಮೀಣ ಭಾಗದಲ್ಲಿ ಹಗಲು ಹೊತ್ತಿನಲ್ಲೇ ಕಾಡುಕೋಣ ಪ್ರತ್ಯಕ್ಷವಾಗಿರುವುದು ಜನಸಾಮಾನ್ಯರಲ್ಲಿ ಆತಂಕವನ್ನು ಮೂಡಿಸಿದೆ. ಕಾಡಿನಿಂದ ನಾಡಿಗೆ ಬಂದಿರುವ ಪ್ರಾಣಿಯಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

https://youtube.com/shorts/EL4OdS5-8Go?feature=share

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!