ಉಪ್ಪಿನಂಗಡಿ, ಆಗಸ್ಟ್ 25 :ಕಳೆದ 6 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಜಮೀಲ್ ಚಾಚಾನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 121/2019, ಕಲಂ: 457, 380 ಐಪಿಸಿ ಪ್ರಕರಣದಲ್ಲಿ, ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 6 ವರ್ಷಗಳಿಂದ ಜಮೀಲ್ ಚಾಚಾ ತಲೆಮರೆಸಿಕೊಂಡಿದ್ದರು. ಈತನ ಬಂಧನಕ್ಕೆ ವಾರಂಟ್ ಕೂಡ ಕೊರಡಿಸಲಾಗಿತ್ತು. ಇದೀಗ ಈ ಆಸಾಮಿಯನ್ನು ಉಪ್ಪಿನಂಗಡಿ ಪೊಲೀಸರು ರಾಜಸ್ಥಾನದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ರಾಜಸ್ಥಾನದ ಬೊಂದಿ ಜಿಲ್ಲೆಯ ಜಮೀಲ್ ಚಾಚಾನನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂಧಿಯವರಾದ ಹೆಚ್ ಸಿ-331 ನೇ ಗಜೇಂದ್ರ ಹಾಗೂ ಪಿಸಿ-2335 ನೇ ರಾಮನಗೌಡ ಅವರು ರಾಜಸ್ಥಾನದಲ್ಲಿ ಈತನನ್ನು ಪತ್ತೆ ಹಚ್ಚಿ,ಕರೆತಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.