BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Ullala ಉಳ್ಳಾಲ: ಧರ್ಮ ರಕ್ಷಣಾ ಮೊಗವೀರ ವೇದಿಕೆಯಿಂದ 'ಮನೆಗೊಂದು ಮರ' ಯಶಸ್ವಿ ಅಭಿಯಾನ


ಉಳ್ಳಾಲ, ಆಗಸ್ಟ್ 29 :  ಧರ್ಮ ರಕ್ಷಣಾ ಮೊಗವೀರ ವೇದಿಕೆ (ರಿ) ಉಳ್ಳಾಲ ಇದರ 13ನೇ ವರ್ಷದ ಶ್ರೀ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯ ಸವಿನೆನಪಿಗಾಗಿ ವರ್ಷಂಪ್ರತಿ ನಡೆಯುವ 'ಮನೆಗೊಂದು ಮರ' ಕಾರ್ಯಕ್ರಮವು ಶುಕ್ರವಾರ ಉಳ್ಳಾಲ ಮೊಗವೀರ ಪಟ್ಟಣ ಹಾಗೂ ಸೇನೆರೆಬೈಲ್ ಉಳ್ಳಾಲ ಭಾಗದ 3 ಮನೆಗಳಿಗೆ ಗಿಡಗಳನ್ನು ನೀಡಿ, ನೆಡುವ ಮೂಲಕ ಯಶಸ್ವಿಯಾಗಿ ಜರಗಿತು.

ಸಂಸ್ಥೆಯ ಪ್ರಧಾನ ಸಂಚಾಲಕರೂ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಧವ ಉಳ್ಳಾಲ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷರಾದ  ಮನೋಜ್ ಸಾಲ್ಯಾನ್, ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಎಚ್. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ವೀಣಾ ಬಿ. ಉಳ್ಳಾಲ್, ಸಂಘಟನಾ ಕಾರ್ಯದರ್ಶಿ ವರದರಾಜ ಅಮೀನ್, ಕಾರ್ಯದರ್ಶಿ ಶ್ರೀಮತಿ ಸುನೀತಾ ಡಿ. ಸಾಲ್ಯಾನ್, ಸಂಚಾಲಕರಾದ  ರಾಜೇಶ್ ಉಳ್ಳಾಲ್ ಹಾಗೂ ವೇದಿಕೆಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!