BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Ullala ತಲೆಗೇರಿದ ಮದ್ಯದ ಅಮಲು, ಮಧ್ಯರಾತ್ರಿ ತಲವಾರು ಝಳಪಿಸಿ ಬಾರ್‌ ಎದುರು ದಾಂಧಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಲಾಕಪ್‌ಗೆ ತಳ್ಳಿದ ಉಳ್ಳಾಲ ಪೊಲೀಸರು..!


ಉಳ್ಳಾಲ,ಆಗಸ್ಟ್ 10 : ಮದ್ಯದ ಅಮಲಿನಲ್ಲಿ ತಲವಾರ್​​​​ ಹಿಡಿದು ಬಾರ್ ಮುಂಭಾಗ ದಾಂಧಲೆ ನಡೆಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ರೌಡಿಶೀಟರ್​​ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ ಮರಗತ್ತಲೆ ನಿವಾಸಿ ಹಾಗು ವೆಲ್ಡಿಂಗ್​ ಕೆಲಸ ಮಾಡುತ್ತಿರುವ ರೌಡಿಶೀಟರ್​ ಮಹಮ್ಮದ್​ ಶಾಕಿರ್​​ (31) ಹಾಗೂ ಈತನಿಗೆ ಸಹಕರಿಸಿದ ಉಳ್ಳಾಲ ಮಂಚಿಲ ಆಟೋ ಚಾಲಕ ಅಶ್ಪಾಕ್ (28) ಬಂಧಿತ ಆರೋಪಿಗಳಾಗಿದ್ದಾರೆ. 

ತೊಕ್ಕೊಟ್ಟಿನಲ್ಲಿ ಶನಿವಾರ ತಡರಾತ್ರಿ ಸುಮಾರು 12ರಿಂದ 12:20ರ ವೇಳೆ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಮ್ಮದ್ ಶಾಕಿರ್, ಕೈಯಲ್ಲಿ ತಲವಾರ್ ಹಿಡಿದುಕೊಂಡು ಬಾರ್‌ ಮುಂಭಾಗ ಸಾರ್ವಜನಿಕರನ್ನು ನಿಂದಿಸುತ್ತಾ ಭೀತಿ ಸೃಷ್ಟಿಸಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಬಾರ್ ಸಿಬ್ಬಂದಿಗೆ ಬೆದರಿಕೆ ಹಾಕಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಾನೆ. ಇದರ ದೃಶ್ಯ ಬಾರ್ ಮುಂಭಾಗದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ರೌಡಿಶೀಟರ್ ಮಹಮ್ಮದ್ ಶಾಕಿರ್ ಹಾಗೂ ಅಶ್ಪಾಕ್‌ನನ್ನು ಬಂಧಿಸಿ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ತಲವಾರ್ ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ. 

https://youtu.be/jEk3vVKPX3s

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!