ಉಡುಪಿ, ಆಗಸ್ಟ್ 05: ಬಡಗುತಿಟ್ಟಿನ ಹಿರಿಯ ಮದ್ದಳೆ ವಾದಕ, ಯಕ್ಷಗಾನ ಗುರು ಬಿ.ಕೃಷ್ಣಸ್ವಾಮಿ ಜೋಯಿಸ್ ಅವರು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಚಾಂತಾರು ನಿವಾಸಿಯಾಗಿರುವ 75 ವರ್ಷದ ಜೋಯಿಸ್ ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಯಕ್ಷಗಾನದ ಎಲ್ಲ ಪ್ರಾಕಾರಗಳಲ್ಲಿ ಸಿದ್ಧಹಸ್ತರಾದ, ಬ್ರಹ್ಮಾವರದಲ್ಲಿ 'ಜೋಯಿಸ'ರೆಂದೇ ಪ್ರಸಿದ್ಧರಾದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದರು. ಭಾಗವತ ನಾರ್ಣಪ್ಪ ಉಪೂರ ಮತ್ತು ಬೇಳಂಜೆ ತಿಮ್ಮಪ್ಪ ನಾಯಕರ ಶಿಷ್ಯರಾಗಿ, ಭಾಗವತಿಕೆ ಮತ್ತು ಮದ್ದಳೆ ವಾದನದಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಎಚ್.ಸುಬ್ಬಣ್ಣ ಭಟ್ಟರ ಮಾರ್ಗದರ್ಶನ ದಲ್ಲಿ ಪ್ರಸಾಧನ ತಜ್ಞರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅಜಪುರ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷರಾಗಿದ್ದು, ದಿ.ಕಾಳಿಂಗ ನಾವಡರ ಸಹಪಾಠಿಯಾಗಿರುವ ಜೋಯಿಸರು ನಾವಡರೊಡನೆ ವಿದೇಶಗಳಲ್ಲಿಯೂ ಯಕ್ಷಗಾನ ಕಾರ್ಯಕ್ರಮ ಗಳನ್ನು ನೀಡಿದವರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ದೀರ್ಘಕಾಲ ಮದ್ದಳೆ ವಾದಕರಾಗಿ ಸೇವೆ ಮಾಡಿದ್ದ ಇವರು ದೇಶ, ವಿದೇಶಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ವಾದಕರಾಗಿ, ಪ್ರಸಾಧನ ಕಲಾವಿದರಾಗಿ ಭಾಗವಹಿಸಿದ್ದರು. ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳದ ಪಾರಂಪರಿಕ ಸೂಕ್ಷ್ಮತೆಗಳನ್ನು ಬಲ್ಲ ಇವರು ನೂರಾರು ಶಿಷ್ಯರನ್ನು ರೂಪಿಸಿದ್ದಾರೆ.
Udupi ಹಿರಿಯ ಯಕ್ಷಗುರು ಬಿ.ಕೃಷ್ಣಸ್ವಾಮಿ ಜೋಯಿಸ್ ನಿಧನ
ಸುದ್ದಿವಾಣಿ
8/05/2026 11:41:00 AM

ಟ್ಯಾಗ್ಗಳು:
ಉಡುಪಿ
ದಕ್ಷಿಣ ಕನ್ನಡ