BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi Supari Killers Arrested Story ಡೇವಿಡ್ ಹತ್ಯೆ ಮಾಡಿದ ಖತರ್ನಾಕ್ ಸುಪಾರಿ ಕಿಲ್ಲರ್‌ ಗಳ ಸೆರೆ ಹಿಡಿದ ರೋಚಕ ಕಥೆ ಹೇಳಿದ ಉಡುಪಿ ಎಸ್‌ಪಿ..!

ಉಡುಪಿ, ಆಗಸ್ಟ್ 08 : ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜರನ್ನು ಹತ್ಯೆ ಮಾಡಿದ ಉತ್ತರ ಭಾರತದ ಖತರ್ನಾಕ್ ಸುಪಾರಿ ಕಿಲ್ಲರ್‌ ಗಳ ಸೆರೆ ಹಿಡಿದ ರೋಚಕ ಕಥೆ  ಉಡುಪಿ ಎಸ್‌ಪಿ ಹರಿರಾಂ ಶಂಕರ್ ಮಾಧ್ಯಾಮಗಳ ಎದುರು ಬಿಚ್ಚಿಟ್ಟಿದ್ದಾರೆ..     

ಶನಿವಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹರಿರಾಂ ಸಂಕರ್ ಅವರು ರೋಚಕ ಕಥಯನ್ನು ಮಾದ್ಯಗಳ ಮುಂದಿಟ್ಟಿದ್ದಾರೆ. ಉತ್ತರಪ್ರದೇಶ ರಾಜ್ಯದ ಥಾಣಾ ಪಿಲ್ವದ ರಾಜು (42), ಉತ್ತರಖಾಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23) ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್ (38)  ಎಂಬ ಮೂವರು ಸುಪಾರಿ ಕಿಲ್ಲರ್‌ಗಳನ್ನು ಪೊಲೀಸರು ಸಾಹಾಸ ಪ್ರದರ್ಶಿಸಿ ಬಂಧಿಸಿದ್ದಾರೆ. ಈ ಮೂವರಲ್ಲಿ ರಾಜು, ಡೇವಿಡ್ ಡಿಸೋಜರನ್ನು ಹತ್ತಿರದಿಂದ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿಯಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಹಾಗೂ ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿ, ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 



ಆಗಸ್ಟ್ 7ರ ಶುಕ್ರವಾರ ಮದ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯಲ್ಲಿ ಡೇವಿಡ್ ಡಿಸೋಜ ಹತ್ಯೆ ಮಾಡಲು ಮೂವರು ಆರೋಪಿಗಳು ಕೂಡ ಬಂದಿದ್ದು, ಅವರಲ್ಲಿ ರಾಜು, ಡೇವಿಡ್ ತಲೆಗೆ ಗುಂಡಿಕ್ಕಿದ್ದನು. ಬಳಿಕ ಇಬ್ಬರು ಬೈಕಿನಲ್ಲಿ, ಮತ್ತೋರ್ವ ಬೇರೆ ವಾಹನದಲ್ಲಿ ಪರಾರಿಯಾಗಿದ್ದನು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳು ಪರಾರಿಯಾದ ಮಾರ್ಗದಲ್ಲಿನ ಸಿಸಿಟಿವಿ ಫುಟೇಜ್ ಪರಿಶೀಲಿಸಿ, ತನಿಖೆ ಮುಂದುವರೆಸಲಾಯಿತು. ಕೃತ್ಯ ಎಸಗಿದ ಬಳಿಕ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಆರೋಪಿಗಳು ಹೋಗುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸ್ ತಂಡವು ತಪಾಸಣೆ ನಡೆಸುವಾಗ ಬಸ್ಸಿನಲಿದ್ದ ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಓಡಿ ಹೋದರು. ಅವರನ್ನು ಬೆನ್ನಟ್ಟಿದ ಪೊಲೀಸರು, ಮೂವರ ಪೈಕಿ ಪ್ರಮುಖ ಆರೋಪಿ ರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾದರು. 

ಈ ವೇಳೆ ಪರಾರಿಯಾದ ಆರೋಪಿ ಅಜಯ್ ರಸ್ತೋಗಿಯನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಮತ್ತೋರ್ವಾರೋಪಿ ಜಿಯಾಹುಲ್ ವಜೂಲ್ ಶೇಖ್‌ನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಶನಿವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಮೂಲಕ ಪೊಲೀಸ್ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸು ವಲ್ಲಿ ಯಶಸ್ವಿಯಾಗಿದೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್ಮತ್ ಅಲಿ ಜಿ., ಡಿ.ಎಸ್.ಬಿ. ವಿಭಾಗದ ಎಸ್ಸೈ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಎಸ್ಸೈ ಮಹೇಶ್, ಕಾಪು ಎಸ್ಸೈ ತೇಜಸ್ವಿ, ಶಿರ್ವ ಎಸ್ಸೈ ಮಂಜುನಾಥ ಮರಬದ, ಕೊಲ್ಲೂರು ಎಸ್ಸೈ ವಿನಯ್, ಕಾರ್ಕಳ ಗ್ರಾಮಾಂತರ ಎಸ್ಸೈ ಪ್ರಸನ್ನ ಎಂ.ಎಸ್., ಪಡುಬಿದ್ರಿ ಎಸ್ಸೈ ಗಳಾದ ಶಕ್ತಿವೇಲು ಹಾಗೂ ಅನಿಲ್, ಶಿರ್ವ ಎಸ್ಸೈ ಲೋಹಿತ್ ಕುಮಾರ್, ಪ್ರೊಬೆಷನರಿ ಎಸ್ಸೈ ಶಿಫಾಝ್ ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಇವರು ಈ ಕಾರ್ಯಾಚರಣೆಯಲ್ಲಿ ನಡೆಸಿದ್ದಾರೆ. 

ಡೇವಿಡ್‌ ಗೆ ಗುಂಡಿಕ್ಕಿದ ರಾಜು ಪಕ್ಕ ಪ್ರೊಫೆಶನಲ್ ಸುಪಾರಿ ಕಿಲ್ಲರ್..! 

 ಡೇವಿಡ್‌ ಗೆ ಗುಂಡಿಕ್ಕಿದ ರಾಜು ಪಕ್ಕ ಪ್ರೊಫೆಶನಲ್ ಸುಪಾರಿ ಕಿಲ್ಲರ್ ಆಗಿದ್ದು ಈತನ ವಿರುದ್ದ  ವಿರುದ್ಧ ಉತ್ತರ ಪ್ರದೇಶ, ರಾಜಸ್ಥಾನ್, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಮಹಿಳೆ ಯರ ಮೇಲೆ ಹಲ್ಲೆ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ವಿರುದ್ಧ ದೆಹಲಿ, ಹರಿಯಾಣ, ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಲ್ಲಿ 8 ಪ್ರಕರಣಗಳು ಮತ್ತು ಜಿಯಾವುಲ್ಲ ಅಲಿಯಾಸ್ ದೀಪಕ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುವ ರಾಜ್ಯಗಳಿಗೆ ತೆರಳಿ ನೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುವುದು. ಇವರು ಮೂವರು ಪಕ್ಕ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರಲ್ಲಿ ನಾಲ್ಕೈದು ಸಿಮ್ ಕಾರ್ಡ್‌ ಗಳು ಮತ್ತು ಮೊಬೈಲ್‌ಗಳಿವೆ. ಅದೇ ರೀತಿ ಇವರಲ್ಲಿ ಹಲವು ಗುರುತಿನ ಚೀಟಿಗಳು ಕೂಡ ಇರುವುದರಿಂದ ಇವರ ಹೆಸರುಗಳಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು. 

ಕೃತ್ಯಕ್ಕೆ ಎರಡು ತಿಂಗಳ ಹಿಂದೆಯೇ ಸಂಚು ರೂಪಿಸಿ ಸಿದ್ಧತೆ ನಡೆಸ ಲಾಗಿತ್ತು. ಈ ಸಂಬಂಧ ಆರೋಪಿಗಳು ಹಿಂದೆ ಒಂದು ಬಾರಿ ಬಂದು ನೋಡಿ ಹೋಗಿದ್ದರು. ವಾರದ ಹಿಂದೆ ಬಂದು ಉಡುಪಿಯಲ್ಲಿ ತಂಗಿದ್ದ ಆರೋಪಿಗಳಿಗೆ ಸ್ಥಳೀಯರು ಸಹಕಾರ ನೀಡಿರುವುದು ಕಂಡುಬಂದಿದೆ. ಈ ಸಂಬಂಧ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಲಾ ಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್ ಸ್ಥಳೀಯವಾಗಿದ್ದು, ಇದರ ಮಾಲಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಂಬರ್ ಪ್ಲೇಟ್ ನಕಲಿಯಾಗಿದ್ದು, ಸ್ಕೂಲ್ ಬಸ್ಸಿನ ನಂಬರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಕೊಲೆಯ ಸೂತ್ರಧಾರನ ಪತ್ತೆಗೆ ಉತ್ತರ ಭಾರತಕ್ಕೆ ಪೊಲೀಸ್ ತಂಡ: 

ಅದಾನಿ ಯುಪಿಸಿಎಲ್ ಗುತ್ತಿಗೆದಾರರಾಗಿದ್ದ ಡೇವಿಡ್ ಡಿಸೋಜ ಹಾಗೂ ಹೊರ ರಾಜ್ಯದ ಗುತ್ತಿಗೆ ಕಂಪೆನಿ ನಡುವಿನ ಹಣಕಾಸು ವಿವಾದವೇ ಈ ಹತ್ಯೆ ಕಾರಣವಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಯುಪಿಸಿಎಲ್‌ಗೆ ಸಂಬಂಧಿಸಿ ಉತ್ತರ ಭಾರತದ ಕಂಪೆನಿಯೊಂದು ಗುತ್ತಿಗೆ ಕಾಮಗಾರಿ ವಹಿಸಿಕೊಂಡಿದ್ದು, ಅದರಲ್ಲಿ ಉಪ ಗುತ್ತಿಗೆಯನ್ನು ಡೇವಿಡ್ ವಹಿಸಿ ಕಾಮಗಾರಿ ನಡೆಸಿದ್ದರು. ಇದರಲ್ಲಿ ಡೇವಿಡ್‌ಗೆ 80ಲಕ್ಷ ರೂ. ಹಣ ಬರಬೇಕಾ ಗಿತ್ತು. ಆದರೆ ಆ ಕಂಪೆನಿಯವರು ನೀಡದ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ಮೊತ್ತದ ಯಂತ್ರೋಪಕರಣಗಳನ್ನು ಡೇವಿಡ್ ತನ್ನ ವಶದಲ್ಲಿ ಇರಿಸಿದ್ದನು. ಇದೇ ದ್ವೇಷದಲ್ಲಿ ಸುಪಾರಿ ನೀಡಿ ಡೇವಿಡ್‌ರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾರ್ಥಮಿಕ ತನಿಖೆಯಿಂದ ತಿಳಿದುಬಂದಿದೆ. ಹತ್ಯೆಗೆ ಸಂಬಂಧಿಸಿ ಆರೋಪಿ ರಾಜು ಖಾತೆಗೆ 2ಲಕ್ಷ ರೂ. ಜಮೆ ಆಗಿರುವುದು ಕಂಡುಬಂದಿದೆ. ಈ ಕೃತ್ಯಕ್ಕೆ ಸಹಕರಿಸಿದ ಸ್ಥಳೀಯರು, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರನ್ನು ಶೀಘ್ರ ಪತ್ತೆ ಹಚ್ಚಲಾಗುವುದು. ಕೊಲೆಯ ಸೂತ್ರಧಾರನ ಪತ್ತೆಗೆ ಪೊಲೀಸ್ ತಂಡವೊಂದು ಉತ್ತರ ಭಾರತಕ್ಕೆ ತೆರಳಿದೆ’ ಎಂದು ಎಸ್ಪಿ ತಿಳಿಸಿದರು. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!