ಉಡುಪಿ, ಆಗಸ್ಟ್ 02: ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪಬ್ ಹಾಗೂ ಬಾರ್ ಗಳಿಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಪರಿಶಿಲನೆ ನಡೆಸಿದ್ದಾರೆ. ಈ ಸಂದರ್ಭ ಆನೇಕ ನಿಯಮ ಬಾಹಿರ ಚಟುವಟಿಕೆಗಳು ಬಾರ್‌ಗಳಲ್ಲಿ ಕಂಡು ಬಂದಿದ್ದು ಪ್ರಕರಣ ದಾಖಲು ಮಾಡಿದ್ದಾರೆ. ಒಟ್ಟು ಆರು ಬಾರ್ ಗಳು ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದಿದೆ. ಈ ಬಾರ್ ಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಹುಕ್ಕಾ ಸೇವನೆ ಮಾಡುತ್ತಿದ್ದಾರೆ ಹಾಗೂ 21 ವರ್ಷ ಕೆಳಗಿನ ವಿದ್ಯಾರ್ಥಿಗಳಿಗೆ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಆಧಾರಿಸಿ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೆರಂಪಳ್ಳಿ ರಸ್ತೆ, ಈಶ್ವರ ನಗರ, ಟೈಗರ್ ಸರ್ಕಲ್ ಬಳಿಯ ಬಾರ್ ಮತ್ತು ಪಬ್ ಗಳಿಗೆ ದಾಳಿ ನಡೆಸಿದಾಗ ಒಟ್ಟು 75 ಮಂದಿ ಅಪ್ರಾಪ್ತ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಇವರಲ್ಲಿ ಕೆಲ ವಿದ್ಯಾರ್ಥಿಗಳು 12 ವರ್ಷದವರು ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಐ ಶಂಭುಲಿಂಗಯ್ಯ ಎಂ.ಇ., ಎಸ್‌ಐ ತಿಮ್ಮೇಶ್ ಬಿ.ಎನ್.,ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಶ್ರೀಶೈಲ ಡಿ.ಎಂ., ಮಲ್ಪೆ ಎಸ್ಸೈ ಅನೀಲ್ ಕುಮಾರ ಡಿ., ಹಿರಿಯಡ್ಕ ಎಸ್‌ಐ ಪುನೀತ್ ಕುಮಾರ್ ಬಿ.ಇ, ಅವರು ಈ ದಾಳಿಗಳ ನೇತೃತ್ವ ವಹಿಸಿದ್ದರುಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 115/2026 ದಾಖಲಿಸಲಾಗಿದ್ದು, ಕರ್ನಾಟಕ ಅಬಕಾರಿ ಅಧಿನಿಯಮ, 1967ರ ಕಲಂ 36(1)(b) ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Udupi Police Raid on Bar pubs ಮಣಿಪಾಲದ ಬಾರ್ ಪಬ್‌ಗಳಲ್ಲಿ ನಿಯಮ ಉಲ್ಲಂಘಿಸಿದ 6 ಬಾರ್ ಗಳ ವಿರುದ್ಧ FIR ದಾಖಲು
ಸುದ್ದಿವಾಣಿ
8/02/2026 09:28:00 PM