Udupi Online Fraud ಆನ್‌ಲೈನ್ ಟ್ರೇಡಿಂಗ್ ವಂಚನೆಗೆ ಮತ್ತೊಂದು ಬಲಿ ಬರೋಬ್ಬರಿ 19.59 ಲಕ್ಷ ರೂ. ಕಳೆದುಕೊಂಡ ಉಡುಪಿ ಸಂದೀಪ್
ಸುದ್ದಿವಾಣಿ
8/16/2026 09:37:00 AM
ಉಡುಪಿ, ಆಗಸ್ಟ್ 16 : ಆನ್‌ಲೈನ್ ಟ್ರೇಡಿಂಗ್ ಮತ್ತು ಹೂಡಿಕೆಯ ಹೆಸರಿನಲ್ಲಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಮೂಲದ ಸಂದೀಪ್ ಎಂಬವರು ಆನ್‌ಲೈನ್ ಟ್ರೇಡಿಂಗ್ ಹೂಡಿಕೆ ಆಫರ್ ಹಾಗೂ ಜಾಹೀರಾತನ್ನು ನಂಬಿ ಒಟ್ಟು 19,59,320 ರೂ. ಕಳೆದುಕೊಂಡಿದ್ದು, ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 6 ರಿಂದ ಶೇ. 7 ರಷ್ಟು ಭರ್ಜರಿ ಲಾಭ ಸಿಗುತ್ತದೆ ಎಂದು ಆರೋಪಿ ಸಂದೀಪ್ ಅವರನ್ನು ನಂಬಿಸಿದ್ದನು. ವಂಚಕರ ಮಾತನ್ನು ನಂಬಿದ ಸಂದೀಪ್ ಅವರು, ಆರೋಪಿ ಸೂಚಿಸಿದ ವಿವಿಧ ಕಂಪನಿ ಹಾಗೂ ಸಂಸ್ಥೆಗಳ ಹೆಸರಿನ ಬ್ಯಾಂಕ್ ಖಾತೆಗಳಿಗೆ ನೆಫ್ಟ್ (NEFT) ಮತ್ತು ಐಎಂಪಿಎಸ್ (IMPS) ಮೂಲಕ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದರು. ಕೊನೆಗೆ ಮೋಸಹೋಗಿರುವುದು ತಿಳಿದುಬಂದಿದ್ದು, ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ
ಟ್ಯಾಗ್ಗಳು:
ಉಡುಪಿ