ಬಸ್ ಹಿಂದೆ ಬರುತ್ತಿದ್ದಂತೆ ಸ್ಕೂಟರ್ ಏಕಾಏಕಿ ಬಲಬದಿಗೆ ತಿರುಗಿದೆ. ಇದನ್ನು ತಪ್ಪಿಸಲು ಹೋಗಿ ಬಸ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ಬಸ್ ಸಮೀಪದ ಪೆಟ್ರೋಲ್ ಬಂಕ್ ಗೋಡೆಗೆ ಡಿಕ್ಕಿಹೊಡೆದು ಮಗುಚಿಬಿದ್ದಿದೆ. ಈ ಸಂಪೂರ್ಣ ದೃಶ್ಯವು ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
35 ಮಂದಿಗೆ ಗಾಯ: ಅಪಘಾತದ ಸಮಯದಲ್ಲಿ ಬಸ್‌ನಲ್ಲಿದ್ದ ಚಾಲಕ ಸೇರಿದಂತೆ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೆಚ್ಚಿನವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಕೂಡಲೇ ಕೂತ್ತಾಟ್ಟುಕುಳಂ (Koothattukulam) ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿರುಸಿನ ರಸ್ತೆಗಳಲ್ಲಿ ಏಕಾಏಕಿ ಲೇನ್ ಬದಲಾವಣೆ ಹಾಗೂ ಅನಿರೀಕ್ಷಿತ ತಿರುವುಗಳು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಎಚ್ಚರಿಸಿದ್ದು, ವಾಹನ ಚಾಯಿಸುವಾಗ ಎಚ್ಚರಿಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಅಗತ್ಯತೆಯನ್ನು ಇದು ಮತ್ತೊಮ್ಮೆ ನೆನಪಿಸಿದೆ.