BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ವಿಶೇಷ

This is the world's only temple for rats ಇದು ಪ್ರಪಂಚದ ಏಕೈಕ ಇಲಿಗಳ ದೇವಾಲಯ,ಇಲ್ಲಿರುವ ಇಲಿಗಳ ಸಂಖ್ಯೆ ಎಷ್ಟು ಗೊತ್ತಾ..!!?


ವಿಭಿನ್ನತೆಯಲ್ಲೂ ಏಕತೆ ಕಾಣುತ್ತಿರುವ ಮತ್ತು ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯೂರಿರುವ ಭಾರತ ದೇಶದಲ್ಲಿರುವ ದೇವಾಲಯಗಳ ಸಂಖ್ಯೆ ಬಹುಷ ಎಣಿಕೆ ಸಿಗದು. ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಷ್ಠಾಪಿಸಿರುವ ದೇವಾಲಯಗಳ ಸಂಖ್ಯೆ ಸಾವಿರ ಸಾವಿರ ಲೆಕ್ಕದಲ್ಲಿದೆ.

 ದೇವಿ ದೇವರುಗಳು, ಆಂಜನೇಯ , ನಾಗರಾಜ ಅಲ್ಲದೆ, ಚಿತ್ರ ತಾರೆಯರು, ಪೊಲೀಸ್ ಮಿಲಿಟರಿ ಅಧಿಕಾರಿಗಳಿಂದ ಹಿಡಿದು ಬೈಕ್ ಗಳಿಗೂ ಸಮರ್ಪಿತವಾದ ವಿಶೇಷ ದೇವಾಲಯಗಳನ್ನು ಭಾರತದಲ್ಲಿ ಕಾಣಬಹುದು. ಆದ್ರೆ ಈ ದೇವಾಯ ಮಾತ್ರ ಎಲ್ಲಕ್ಕಿಂತ ತೀರ ಭಿನ್ನ. ಯಾಕೆಂದ್ರೆ ಈ ದೇವಾಲಯದಲ್ಲಿ ಭಕ್ತರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಇಲಿಗಳು ನಿರ್ಭಯವಾಗಿ ಓಡಾಡುತ್ತಿರುತ್ತವೆ. ಕಾರಣ ವಿಘ್ನೇಶ್ವರನ ವಾಹನವಾದ ಮೂಷಕ ಅಥವಾ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗಿದೆ. ಅವುಗಳಿಗೆ ಪ್ರತ್ಯೇಕವಾಗಿ ಪ್ರಸಾದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.

ಅಂದ ಹಾಗೇ ಈ ದೇವಾಲಯವಿರುವುದು ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ಎಂಬ ಪುಟ್ಟ ಊರಿನಲ್ಲಿ. ಇದು ಕರ್ಣಿ ಮಾತೆಗೆ ಮೀಸಲಾದ ದೇವಾಲಯವಾಗಿದ್ದರೂ ಇದು ಇಲಿಗಳ ದೇವಸ್ಥಾನ ಎಂದು ಹೆಸರುವಾಸಿಯಾಗಿದೆ.

ಪ್ರಸ್ತುತ 25 ಸಾವಿರಕ್ಕೂ ಅಧಿಕ ಇಲಿಗಳು ಈ ದೇವಸ್ಥಾನ ಮತ್ತು ದೇವಳದ ಆವರಣದಲ್ಲಿ ನೆಲೆಸಿವೆ. ಅವುಗಳಿಗೆ ಎಲ್ಲೆಂದರಲ್ಲಿ ಓಡಾಡಲೂ ಮುಕ್ತ ಸ್ವಾತಂತ್ರ್ಯವಿದೆ. ಇವುಗಳ ದರ್ಶನಕ್ಕೆ ದೂರ ದೂರದ ಊರುಗಳಿಂದ  ಭಕ್ತರು ನಿತ್ಯ ಆಗಮಿಸುತ್ತಿರುತ್ತಾರೆ.  ಜೊತೆಗೆ ಜಗತ್ತಿನ ವಿವಿಧೆಡೆಯಿಂದಲೂ ಸಹ ಪ್ರವಾಸಿಗರು ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತರು ದೇವಳದ ಮೂಲೆ ಮೂಲೆ ಸುತ್ತಾಡಿದರೂ ಒಂದೇ ಒಂದು ಇಲಿ ಭಕ್ತರಿಗೆ ಕಚ್ಚುವುದಾಗಲೀ , ಹಾನಿ ಮಾಡಿರುವುದಾಗಿ  ಇಲ್ಲವಂತೆ.  ವಿಶೇಷವೆಂದರೆ ಇಲ್ಲಿರುವ ಸಹಸ್ರಾರು ಇಲಿಗಳಲ್ಲಿ ಕೇವಲ ಕೆಲವೇ ಕೆಲವು ಶ್ವೇತ ವರ್ಣದ ಇಲಿಗಳಿದ್ದು ಅವುಗಳನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಆದ್ರೆ ಈ ಬಿಳಿ ಇಲಿಗಳು ದರ್ಶನ ನೀಡುವುದು ಅತೀ ವಿರಳವಾಗಿದ್ದು ಒಂದು ವೇಳೆ  ಇವುಗಳು ಕಾಣಸಿಕ್ಕರೆ ಕರ್ಣಿ ಮಾತೆಯ ನೇರ ಕೃಪಾದೃಷ್ಟಿ ನಿಮ್ಮ  ಮೇಲಿದೆ ಎಂಬ ನಂಬಿಕ್ಕೆ ಸ್ಥಳೀಯರದ್ದು. ಇಲ್ಲಿ ಇಲಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ಅವುಗಳಿಗೆ ಯಾವುದೇ ಹಾನಿ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಆಕಸ್ಮಿಕವಾಗಿ ಇಲಿಯನ್ನು ಕೊಂದರೆ, ಪ್ರಾಯಶ್ಚಿತ್ತವಾಗಿ ಆ ಅಪರಾಧಿ  ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಇಲಿಯನ್ನು ಬದಲಿಗೆ ದೇವಳಕ್ಕೆ ನೀಡಬೇಕಾಗುತ್ತದೆ.

 ಏನಿದರ ಹಿನ್ನೆಲೆ ..?

ಕರಣಿ ಮಾತೆ ಚರಣ್ ಜಾತಿಯಲ್ಲಿ ಜನಿಸಿದ ಒಬ್ಬ ಹಿಂದು ತಪಸ್ವಿಣಿ. 14 ನೇ ಶತಮಾನದಲ್ಲಿ ಜನಿಸಿದ ಈ ಕರ್ಣಿ ಮಾತೆ ದುರ್ಗಾ ಮಾತೆಯ ಅವತಾರ  ಎಂದು ಭಕ್ತರ ನಂಬಿಕೆ.   ಜೋಧಪುರ್ ಹಾಗು ಬಿಕಾನೇರ್ ರಾಜವಂಶಸ್ಥರ ಅಧಿ ದೇವತೆಯಾಗಿರುವ ಕರಣಿ ಮಾತೆ ಸುಮಾರು 151 ವರ್ಷಗಳ ಕಾಲ ಜೀವಿಸಿದ್ದಳೆಂದು ಹೇಳಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ, ಕಿಪೋಜಿ ಚರಣ್ ಎಂಬುವನ ಪತ್ನಿಯಾಗಿದ್ದ ಕರಣಿ ಮಾತೆಯು ಸಮಯ ಸರಿದಂತೆ ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದುತ್ತಾಳೆ. ಸಾಧ್ವಿಯಾಗಿ ಪರಿವರ್ತನೆಗೊಂಡು ದೇವರ ಧ್ಯಾನದಲ್ಲೆ ತನ್ನ ಜೀವನವನ್ನು ಸವೆಸುತ್ತಾಳೆ.  ಆ ಸಂದರ್ಭದಲ್ಲಿ ಅನೇಕ ಕಾರ್ಣಿಕಗಳು ಆಕೆಯಿಂದ ಸಂಭವಿಸುತ್ತವೆ. ಕರ್ಣಿ ಮಾತೆಯ  ಮಲಮಗ ಲಕ್ಷ್ಮಣನು ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ.  ಆಗ  ಆತನನ್ನು ಪುನರುಜ್ಜೀವನಗೊಳಿಸುವಂತೆ ಕರ್ಣಿ ಮಾತೆ ಯಮ ದೇವರನ್ನು ಬೇಡಿಕೊಂಡಳು ಎಂದು ಹೇಳಲಾಗುತ್ತದೆ. ಆಕೆಯ ಭಕ್ತಿಗೆ ಮೆಚ್ಚಿದ ಯಮನು ಆಕೆಯ ಕೋರಿಕೆಯನ್ನು ಈಡೇರಿಸಿ, ಲಕ್ಷ್ಮಣನನ್ನು ಮತ್ತು ಆಕೆಯ ಎಲ್ಲಾ ಗಂಡು ಮಕ್ಕಳನ್ನು ಇಲಿಗಳಾಗಿ ಪುನರ್ಜನ್ಮ ನೀಡಿದನು. ಆದ್ದರಿಂದ ಅವರ ಗೌರವಾರ್ಥವಾಗಿ ಈ ದೇವಾಲಯ ನಿರ್ಮಾಣವಾಗಿ  ಅಂದಿನಿಂದ ಮಹತ್ತರವಾದ ಆಧ್ಯಾತ್ಮಿಕ ಮಹತ್ವದ ಸ್ಥಳವಾಗಿದೆ.



 

.

 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!