ಬಂಟ್ವಾಳ, ಆಗಸ್ಟ್ 20 : 'ಟೀಮ್ ಸತ್ಯಜಿತ್ ಸುರತ್ಕಲ್' ಇದರ ವಾರ್ಷಿಕ ಸಭೆಯು ಬಂಟ್ವಾಳ ತುಂಬೆ ಶಾರದಾ ಸಭಾ ಭವನದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು. ಮುಂಬರುವ ದಿನಗಳಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.
ಸಂಘಟನೆಯ ಪ್ರಮುಖರಾದ ಸತ್ಯಜಿತ್ ಸುರತ್ಕಲ್ ಅವರ ಮುಂದಿನ ರಾಜಕೀಯ ಹೆಜ್ಜೆಗಳು ಮತ್ತು ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಣಯಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಜೊತೆಗೆ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಟ್ಟು 8 ತಾಲೂಕುಗಳಿಗೆ ನೂತನ ಸಮಿತಿಗಳನ್ನು ರಚಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಪ್ರಮುಖರಾದ ಸತ್ಯಜಿತ್ ಸುರತ್ಕಲ್, ರವಿರಾಜ್ ಬಿಸಿ ರೋಡ್, ಸಂತೋಷ್ ಪೊಳಲಿ, ಸಂದೀಪ್ ಪಂಪ್ವೆಲ್, ಜಗದೀಶ್ ನೇತ್ತರಕೆರೆ, ಧನಂಜಯ್ ಕುಂದಾಪುರ, ಸಂದೀಪ್ ಅಂಬ್ಲಮೊಗರು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು ಸಭೆಯ ಯಶಸ್ವಿಗೆ ಕೈಜೋಡಿಸಿದರು.
