BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Sullia Snake bite ನೀರಿನ ಪೈಪ್ ಸರಿಪಡಿಸಲು ಹೋದ ವ್ಯಕ್ತಿ ತಲೆಗೆ ಕಚ್ಚಿದ ಹಾವು, ಆಸ್ಪತ್ರೆಗೆ ದಾಖಲು..!


ಸುಳ್ಯ,ಆಗಸ್ಟ್ 11 :ಮನೆಗೆ ಬರುವ ನೀರಿನ ಪೈಪ್ ಸರಿಪಡಿಸಲು ತೆರಳಿದ್ದ ವ್ಯಕ್ತಿಯೋರ್ವರ ತಲೆಗೆ ಹಾವು ಕಚ್ಚಿದ ಘಟನೆ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ದೇರಾಜೆ ಗುಡ್ಲಾದಲ್ಲಿನಡೆದಿದೆ. ಆಟೋ ಮೆಕ್ಯಾನಿಕ್ ಮನೋಹರ ಅವರು ಹಾವು ಕಚ್ಚಿಸಿಕೊಂಡ ವ್ಯಕ್ತಿಯಾಗಿದ್ದಾರೆ. 

ಮನೋಹರ ಅವರ ಮನೆಗೆ ಗುಡ್ಡೆಯಿಂದ ಬರುತ್ತಿದ್ದ ನೀರಿನ ಪೈಪ್‌ನಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿರಲಿಲ್ಲ. ಪೈಪ್ ಬ್ಲಾಕ್ ಆಗಿರಬಹುದು ಎಂದು ಭಾವಿಸಿದ ಅವರು, ಅದನ್ನು ಸರಿಪಡಿಸಲು ಗುಡ್ಡೆಯ ಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿದ್ದ ಹಾವೊಂದು ಏಕಾಏಕಿ ಅವರ ತಲೆಯ ಭಾಗಕ್ಕೆ ಕಚ್ಚಿದೆ. ತಮ್ಮ ತಲೆಗೆ ಹಾವು ಕಚ್ಚಿರುವುದನ್ನು ಖಚಿತಪಡಿಸಿಕೊಂಡ ಮನೋಹರ ಅವರು ಧೈರ್ಯಗೆಡದೆ ತಕ್ಷಣವೇ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಸ್ಥಳೀಯರೊಬ್ಬರಿಗೆ ಕರೆ ಮಾಡಿ, ಅವರ ಜೀಪಿನಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಕೂಡಲೇ ಸ್ಪಂದಿಸಿದ ಸುಳ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರು ತುರ್ತು ಪರೀಕ್ಷೆ ನಡೆಸಿ ಅಗತ್ಯ ವಿಷನಿರೋಧಕ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ತರಿತ ಹಾಗೂ ಸೂಕ್ತ ಚಿಕಿತ್ಸೆಯ ಪರಿಣಾಮವಾಗಿ ಮನೋಹರ ಅವರು ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!