ಸುಳ್ಯ, ಆಗಸ್ಟ್ 27 : ಮಂಗಳೂರು ಮಡಿಕೇರಿ ಹೆದ್ದಾರಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಅರಂತೋಡು ದೇವರಕೊಲ್ಲಿ ಬಳಿ ಟ್ರಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಟೆಂಪೋ ಟ್ರಾವೆಲರ್ (ಟಿಟಿ) ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಿಂದ ಬಂದ ಪ್ರವಾಸಿಗರ ಗುಂಪು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ದೇವರಕೊಲ್ಲಿ ಅಬ್ಬಿ ಜಲಪಾತದ ಬಳಿ ರಸ್ತೆಬದಿಯಲ್ಲಿ ಟಿಟಿ ವಾಹನವನ್ನು ಸ್ವಲ್ಪ ವಿರಮಿಸಲು ನಿಲ್ಲಿಸಿದ್ದಾಗ ಈ ಅವಘಡ ಸಂಭವಿಸಿದೆ.
ಸುಳ್ಯದ ಕಡೆಗೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ನಿಂತಿದ್ದ ಪ್ರಯಾಣಿಕ ವಾಹನದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಟಿಟಿ ಒಳಗೆ ಇದ್ದ ಏಳು ಪ್ರವಾಸಿಗರಲ್ಲಿ ಒಬ್ಬ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಕೂಡ ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಂಬ್ಯುಲೆನ್ಸ್‌ಗಳ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕ್ರೇನ್ ಬಳಸಿ ಉರುಳಿದ ಲಾರಿಯನ್ನು ಮೇಲಕ್ಕೆತ್ತಿ ಹೆದ್ದಾರಿಯನ್ನು ತೆರವುಗೊಳಿಸಲಾಯಿತು.