ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 48 (LC-48) ರಲ್ಲಿ ಆರ್ಸಿಸಿ ಬಾಕ್ಸ್ಗಳನ್ನು ಅಳವಡಿಸಲು ತಾತ್ಕಾಲಿಕ ಗರ್ಡರ್ಗಳನ್ನು ಹಾಕುವ ಮತ್ತು ತೆರವುಗೊಳಿಸುವ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕಾಮಗಾರಿಗಳ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ, ಭಾಗಶಃ ರದ್ದುಗೊಳಿಸಲಾಗುತ್ತದೆ, ಮಾರ್ಗ ಬದಲಾಯಿಸಲಾಗುತ್ತದೆ, ಸಮಯ ಮರುನಿಗದಿಗೊಳಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ:
I. ರೈಲುಗಳ ಸಂಚಾರ ರದ್ದು:
1. ದಿನಾಂಕ 19.08.2026 ಮತ್ತು 26.08.2026 ರಂದು ಚಿಕ್ಕಮಗಳೂರು–ಯಶವಂತಪುರ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16239), ಯಶವಂತಪುರ–ಚಿಕ್ಕಮಗಳೂರು ಎಕ್ಸ್’ಪ್ರೆಸ್ (16240), ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ ಎಕ್ಸ್’ಪ್ರೆಸ್ (12614), ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66567) ಮತ್ತು ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66572) ರೈಲುಗಳ ಸಂಚಾರ ರದ್ದಾಗಲಿವೆ.
2. ದಿನಾಂಕ 19.08.2026, 22.08.2026 ಮತ್ತು 26.08.2026 ರಂದು ಯಲಹಂಕ–ಅರಸೀಕೆರೆ ಮೆಮು (66505) ಹಾಗೂ ಅರಸೀಕೆರೆ–ಯಲಹಂಕ ಮೆಮು (66506) ರೈಲುಗಳ ಸಂಚಾರ ರದ್ದಾಗಲಿವೆ.
II. ರೈಲುಗಳ ಸಂಚಾರ ಭಾಗಶಃ ರದ್ದು:
1. ದಿನಾಂಕ 19.08.2026, 22.08.2026, 23.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ಪ್ರಯಾಣ ಮುಕ್ತಾಯಗೊಳಿಸಲಿದೆ.
2. ದಿನಾಂಕ 19.08.2026, 22.08.2026, 23.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಎಕ್ಸ್’ಪ್ರೆಸ್ ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರು ಬದಲಿಗೆ ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
3. ದಿನಾಂಕ 19.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಎಕ್ಸ್’ಪ್ರೆಸ್ ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ಪ್ರಯಾಣ ಮುಕ್ತಾಯಗೊಳಿಸಲಿದೆ.
III. ರೈಲುಗಳ ಮಾರ್ಗ ಬದಲಾವಣೆ:
1. ದಿನಾಂಕ 18.08.2026 ಮತ್ತು 25.08.2026 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್’ಪ್ರೆಸ್ ರೈಲು ಅರಸೀಕೆರೆ–ಹಾಸನ–ನೆಲಮಂಗಲ–ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ತಿಪಟೂರು ಹಾಗೂ ತುಮಕೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
2. ದಿನಾಂಕ 19.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್’ಪ್ರೆಸ್ ಮೈಸೂರು–ಹೊಳೆನರಸೀಪುರ–ಹಾಸನ–ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ಪಾಂಡವಪುರದಿಂದ ತಿಪಟೂರು ನಡುವಿನ ಯಾವುದೇ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
3. ದಿನಾಂಕ 19.08.2026, 22.08.2026, 23.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್’ಸಿಟಿ ಎಕ್ಸ್’ಪ್ರೆಸ್ ರೈಲು ಚಿಕ್ಕಬಾಣಾವರ–ನೆಲಮಂಗಲ–ಹಾಸನ–ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
IV. ರೈಲುಗಳ ಸಮಯ ಮರುನಿಗದಿ:
1. ದಿನಾಂಕ 17.08.2026 ಮತ್ತು 24.08.2026 ರಂದು ಹೊರಡುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ಎಕ್ಸ್'ಪ್ರೆಸ್ ರೈಲು ಉದಯಪುರ ಸಿಟಿಯಿಂದ 200 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
2. ದಿನಾಂಕ 17.08.2026 ಮತ್ತು 24.08.2026 ರಂದು ಹೊರಡುವ ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಎಕ್ಸ್'ಪ್ರೆಸ್ ರೈಲು ಶ್ರೀ ಗಂಗಾನಗರದಿಂದ 150 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
3. ದಿನಾಂಕ 18.08.2026 ಮತ್ತು 25.08.2026 ರಂದು ಹೊರಡುವ ರೈಲು ಸಂಖ್ಯೆ 17316 ವೇಳಂಕಣ್ಣಿ–ವಾಸ್ಕೋ ಡ ಗಾಮ ಎಕ್ಸ್'ಪ್ರೆಸ್ ವೇಳಂಕಣ್ಣಿಯಿಂದ 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
4. ದಿನಾಂಕ 19.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ನಾರ್ತ್ ಎಕ್ಸ್'ಪ್ರೆಸ್ ಎಸ್ಎಸ್ಎಸ್ ಹುಬ್ಬಳ್ಳಿಯಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
V. ರೈಲುಗಳ ಸಂಚಾರ ನಿಯಂತ್ರಣ:
1. ದಿನಾಂಕ 19.08.2026 ಮತ್ತು 26.08.2026 ರಂದು ಹೊರಡುವ ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್'ಪ್ರೆಸ್ ರೈಲು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
2. ದಿನಾಂಕ 21.08.2026 ಮತ್ತು 22.08.2026 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್'ಪ್ರೆಸ್ ರೈಲು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.