BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

South Canara Photographers Association ಮಂಗಳೂರಿನಲ್ಲಿ SKPA ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ 2026 ಆಚರಣೆ: ಗತ ವೈಭವ ಸಾರಿದ ಹಳೆ ಕ್ಯಾಮೆರಗಳು..!



ಮಂಗಳೂರು, ಆಗಸ್ಟ್ 19 : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (SKPA) ಮಂಗಳೂರು ವಲಯದ ವತಿಯಿಂದ ಆಯೋಜಿಸಲಾದ ವಿಶ್ವ ಛಾಯಾಗ್ರಹಣ ದಿನಾಚರಣೆ 2026 ಕಾರ್ಯಕ್ರಮವು ನಗರದ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು SKPAಯ ಸ್ಥಾಪಕ ಸದಸ್ಯರು  ಶಾಂತಾರಾಮ್ ರಾವ್, SKPಸಹಕಾರಿ ಬ್ಯಾಂಕ್‌ನ ನಿರ್ದೇಶಕರು ವಿಠ್ಠಲ್ ಚೌಟ, ಮಹಾವೀರ ಏಜೆನ್ಸಿಯ ಮಾಲಕರಾದ ಸುಧಾಕರ್ ಶೆಣೈ, ಫಿಜಾ ಬೈ ನೆಕ್ಸಸ್ ಮಾಲ್‌ನ ಚೀಫ್ ಮ್ಯಾನೇಜರ್ ಸುನೀಲ್ ಕುಮಾರ್, SKPA ಸ್ಥಾಪಕ ಸದಸ್ಯರಾದ ಜಯಕರ್ ಸಮರ್ಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಮಂಗಳೂರು ವಲಯದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಗೌರವ ಅಧ್ಯಕ್ಷರು ಮಧು ಮಂಗಳೂರು , ಪದ್ಮ ನಾಭ ಫೋಟೋ ಕಿನ,ಹಾಗೂ ಗಣ್ಯ ಅತಿಥಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ನಿರೂಪಣೆ ಯಲ್ಲಿ ಛಾಯಾ ಕಾರ್ಯದರ್ಶಿ ಸ್ವೀಟನ್ ಪಿಂಟೋ ಸಹಕರಿಸಿದರು. 

ಈ ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರದ ಹಿರಿಯರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದು, ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಶುಭ ಹಾರೈಸಿದರು. 

ಛಾಯಾಗ್ರಹಣವು ಕ್ಷಣಗಳನ್ನು ಮಾತ್ರ ಸೆರೆಹಿಡಿಯುವುದಲ್ಲ; ಅದು ನೆನಪುಗಳಿಗೆ ಶಾಶ್ವತ ರೂಪ ನೀಡುವ ಕಲೆ ಆಗಿದ್ದು ಅದರ ಇತಿಹಾಸದ ಪರಿಚಯವನ್ನು ನೀಡುವ ನಿಟ್ಟಿನಲ್ಲಿಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಹಳೆ ಕ್ಯಾಮಾರಗಳ ಪ್ರದರ್ಶನವನ್ನು ಬೆಳಗ್ಗಿನಿಂದ ಸಂಜೆಯವರೆಗೆ ನಡೆಸಲಾಯಿತು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!