BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Shivamogga:14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬಿಡದ ಮಗ, ತಂದೆಯನ್ನೇ ಕೊಲೆಗೈದು ಬಾವಿಗೆ ಎಸೆದ ಮಗ..!


ಶಿವಮೊಗ್ಗ, ಆಗಸ್ಟ್ 19 : ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯನ್ನು ಮಗನೇ ಕೊಲೆ ಮಾಡಿ ಮೃತ ದೇಹವನ್ನು ಚಿಕ್ಕಪ್ಪನ ಜಮೀನಿನಲ್ಲಿರುವ ಬಾವಿಗೆ ಎಸೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಸಮೀಪದ ಗೊರಗೋಡಿನಲ್ಲಿ ನಡೆದಿದೆ. ಗ್ರಾಮದ ಸುಬ್ರಾಯ (55) ಮೃತ ವ್ಯಕ್ತಿಯಾಗಿದ್ದಾರೆ. 

ಆರೋಪಿ ಮಗ ಜಯಂತ್, ತಂದೆಯ ಜೊತೆ ಜಗಳಕ್ಕಿಳಿದು, ಕತ್ತಿ ಹಾಗೂ ಕೋಲಿನಿಂದ ತಂದೆಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತಂದೆಯನ್ನು ಕೊಲೆಗೈದ ಬಳಿಕ ತಮ್ಮ ಚಿಕ್ಕಪ್ಪನ ಗದ್ದೆಯಲ್ಲಿರುವ ಬಾವಿಗೆ ಶವವನ್ನು ಎಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಲೆಯಾಗಿರುವ ಸುಬ್ರಾಯ , ಈ ಹಿಂದೆ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ ಸುಮಾರು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನಂತೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ ಇತ್ತೀಚೆಗೆ, ಅಂದರೆ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ವಾಪಸ್ ಬಂದಿದ್ದ ಎನ್ನಲಾಗಿದೆ.

ಜೈಲಿನಿಂದ ಬಿಗಡೆಯಾಗಿ ಬಂದ ಬಳಿಕ ಊರಿಗೆ ಬಾರದೇ ಬೇರೆ ಊರಿನಲ್ಲಿ ಸುಬ್ರಾಯ ನೆಲೆಸಿದ್ದನಂತೆ. ಆದರೆ 5 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ ಆತ, ಊರಿಗೆ ಬಂದವನು ತನ್ನ ಪತ್ನಿ ಹಾಗೂ ಮಗನಿಗೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅವರನ್ನು ಕೊಲೆಗೆ ಬೆದರಿಸುತ್ತಿದ್ದನಂತೆ. ಈ ಬಗ್ಗೆ ಪತ್ನಿ ಮತ್ತು ಮಗ ಇಬ್ಬರು ಪೊಲೀಸರಿಗೆ ದೂರು ಕೂಡ ನೀಡಿದ್ದರಂತೆ.

ಆದರೆ ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿ ಕ್ರಮಕೈಗೊಳ್ಳಬೇಕು ಎಂದಿರುವಾಗಲೇ ಮತ್ತೆ ಸುಬ್ರಾಯ, ಮಗ ಹಾಗೂ ಪತ್ನಿಯೊಂದಿಗೆ ಜಗಳ ಮಾಡಿದ್ದಾನಂತೆ. ಇದರಿಂದ ತಪ್ಪಿಸಿಕೊಳ್ಳಲು ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕೃತ್ಯ ಎಸಗಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!