BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Saudi Arebia snake bite ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಾವು ಕಡಿತ, ಭಾರತೀಯ ಮೂಲದ ಯುವಕ ಮೃತ್ಯು..!


ರಿಯಾದ್, ಆಗಸ್ಟ್ 10 :  ಸೌದಿ ಅರೇಬಿಯಾದ ಮರುಭೂಮಿಯಲ್ಲಿ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಭಾರತೀಯ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಸೌದಿ ಅರೇಬಿಯಾದ ಹಫರ್ ಅಲ್-ಬಾಟಿನ್ ನಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಮರುಭೂಮಿಯಲ್ಲಿ ಈ ಘಟನೆ ನಡೆದಿದೆ. ಹಾವು ಕಡಿತದಿಂದ ಮೃತಪಟ್ಟ ಯುವಕ ಪಂಜಾಬಿನವರಾಗಿದ್ದು ಗರ್ವಿಂದರ್ ಸಿಂಗ್ (26)  ಎಂದು ಗುರುತ್ತಿಸಲಾಗಿದೆ.  

ಶಿಪ್ಪಿಂಗ್ ಕಂಪನಿಯೊಂದರ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗರ್ವಿಂದರ್ ಸಿಂಗ್, ಟ್ರಕ್ ಜೊತೆ ಹೊರಟ ಎರಡು ದಿನಗಳ ಕಾಲ ಯಾವುದೇ ಮಾಹಿತಿ ಸಿಗದ ನಂತರ ವಾಹನದ ಜಿಪಿಎಸ್ ಪರಿಶೀಲಿಸಿದಾಗ ವಾಹನ ಪತ್ತೆಯಾಗಿದೆ. ಆದರೆ ಗರ್ವಿಂದರ್ ಸಿಂಗ್ ಪತ್ತೆಯಾಗಲಿಲ್ಲ. ಬಳಿಕ  ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ, ಪೊಲೀಸರು ಟ್ರಕ್ ಪತ್ತೆಯಾದ ಸ್ಥಳದ ಬಳಿಯ ಮರುಭೂಮಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಗರ್ವಿಂದರ್ ಸಿಂಗ್ ಅವರ ಶವ ಪತ್ತೆಯಾಗಿದೆ.  ತನಿಖೆಯಲ್ಲಿ ಟ್ರಕ್‌ನಲ್ಲಿ ಅವರ ಮೊಬೈಲ್ ಫೋನ್, ಕೈಚೀಲ ಮತ್ತು ಇತರ ವೈಯಕ್ತಿಕ ವಸ್ತುಗಳು ಯತ ಸ್ಥಿತಿಯಲ್ಲಿದ್ದುವು. ವಾಹನದಲ್ಲಿ ಇಂಧನವಿತ್ತು ಸಾಕಷ್ಟು ಇತ್ತು ಮತ್ತು ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಬಳಿಕ ಪೊಲೀಸ್ ತನಿಖೆ, ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ವರದಿಯ ಆಧಾರದ ಮೇಲೆ, ಅಧಿಕಾರಿಗಳು ಸಾವಿಗೆ ಕಾರಣ ಹಾವು ಕಡಿತ ಎಂದು ದೃಢಪಡಿಸಿದರು. ಸೌದಿ ಅರೇಬಿಯಾದ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಅವರ ಶವವವನ್ನು ಭಾರತಕ್ಕೆ ತರಲಾಗಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!