BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Rashmika Mandanna ಸಿನಿಮಾ ಶೂಟಿಂಗ್ ನಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಗಂಭಿರ ಗಾಯ, ಆಸ್ಪತ್ರೆಗೆ ದಾಖಲು


ಹೈದರಾಬಾದ್, ಆಗಸ್ಟ್ 01: ಸಿನಿಮಾ ಶೂಟಿಂಗ್ ನಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. 
ತಮ್ಮ ಮುಂಬರುವ ಚಿತ್ರಗಳಿಗಾಗಿ ಕಠಿಣ ಡ್ಯಾನ್ಸ್ ಶೂಟಿಂಗ್ ವೇಳೆ ಅವರ ತೊಡೆಯ ಭಾಗದ ಸ್ನಾಯುರಜ್ಜು ಸಂಪೂರ್ಣವಾಗಿ ಹರಿದು ಗಂಭೀರ ಗಾಯವಾಗಿದೆ. ಅವರನ್ನು ಆಸಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಶ್ಮಿಕಾ ಪ್ರಸ್ತುತ ‘ರಣಬಾಲಿ’ (Ranabaali) ಮತ್ತು ‘ಮೈಸಾ’ (Mysaa) ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಚಿತ್ರಗಳ ಸತತ ಹಾಗೂ ತೀವ್ರ ಆಕ್ಷನ್ ದೃಶ್ಯಗಳು ಮತ್ತು ಕಠಿಣ ನೃತ್ಯ ಅಭ್ಯಾಸದ ಕಾರಣದಿಂದಾಗಿ ಈ ಗಾಯ ಸಂಭವಿಸಿದೆ. ಕ್ರೀಡಾಪಟುಗಳಿಗೆ (Athletes) ಎದುರಾಗುವಂತಹ ಈ ಪ್ರಮಾಣದ ಗಂಭೀರ ಗಾಯವನ್ನು ಕಂಡು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಅವರ ಗಾಯದ ಗಂಭೀರತೆಯನ್ನು ಪರಿಗಣಿಸಿರುವ ವೈದ್ಯಕೀಯ ತಜ್ಞರು, ಅವರಿಗೆ ಸಂಪೂರ್ಣವಾಗಿ 6 ವಾರಗಳ ಕಾಲ (ಒಂದೂವರೆ ತಿಂಗಳು) ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಹಾಗೂ ಕಟ್ಟುನಿಟ್ಟಿನ ಫಿಸಿಯೋಥೆರಪಿ ಮತ್ತು ಪುನರ್ವಸತಿ (Rehabilitation) ಪ್ರಕ್ರಿಯೆಗೆ ಒಳಪಡುವಂತೆ ಸಲಹೆ ನೀಡಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!