BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Rapido Karnataka Licence ಕರ್ನಾಟಕದಲ್ಲಿ ರಾಪಿಡೋಗೆ ಮತ್ತೆ 5 ವರ್ಷಗಳ ಅಧಿಕೃತ ಲೈಸೆನ್ಸ್


ಬೆಂಗಳೂರು, ಆಗಸ್ಟ್ 14 : ಪ್ರಮುಖ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಯಾದ 'ರಾಪಿಡೋ'ಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕಾನೂನಾತ್ಮಕ ಭದ್ರತೆ ಸಿಕ್ಕಿದೆ. ರಾಜ್ಯ ಸಾರಿಗೆ ಪ್ರಾಧಿಕಾರದಿಂದ ರಾಪಿಡೋ ಸಂಸ್ಥೆಯು ಅಧಿಕೃತವಾಗಿ ಕ್ಯಾಬ್ ಸೇವೆಗಳನ್ನು ಒದಗಿಸಲು ಬರೋಬ್ಬರಿ ಐದು ವರ್ಷಗಳ ಅವಧಿಯ ಪರವಾನಗಿಯನ್ನು ಪಡೆದುಕೊಂಡಿದೆ.

‘ಕರ್ನಾಟಕ ಆನ್-ಡಿಮ್ಯಾಂಡ್ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್‌ಗಳ ನಿಯಮಗಳು, 2016’ ರ ಅಡಿಯಲ್ಲಿ ಈ ಮಹತ್ವದ ಅನುಮೋದನೆ ಸಿಕ್ಕಿದ್ದು, ಈ ಲೈಸೆನ್ಸ್ ಆಗಸ್ಟ್ 2031 ರವರೆಗೆ ಮಾನ್ಯತೆ ಹೊಂದಿರಲಿದೆ.ರಾಪಿಡೋ ಸಂಸ್ಥೆಯನ್ನು ಮುನ್ನಡೆಸುವ ‘ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’, ಈ ನಿಯಂತ್ರಕ ಅನುಮೋದನೆಯಿಂದಾಗಿ ರಾಜ್ಯದಲ್ಲಿ ತನ್ನ ಕ್ಯಾಬ್ ಕಾರ್ಯಾಚರಣೆಗಳನ್ನು ಯಾವುದೇ ಅಡೆತಡೆಯಿಲ್ಲದೇ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.ಕರ್ನಾಟಕ ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಾರಿಗೆ ಒದಗಿಸಲು ಬದ್ಧರಾಗಿದ್ದೇವೆ ಎಂದು ಸಂಸ್ಥೆಯ ಸಹ-ಸ್ಥಾಪಕರಾದ ಪವನ್ ಗುಂಟುಪಲ್ಲಿ ತಿಳಿಸಿದ್ದಾರೆ. ಸದ್ಯ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ರಾಪಿಡೋ ಕ್ಯಾಬ್‌ಗಳು ಸಂಚರಿಸುತ್ತಿವೆ.

ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅರ್ಬನ್ ಮೊಬಿಲಿಟಿ ಮಿಷನ್' (ನಗರ ಸಾರಿಗೆ ಮಿಷನ್) ಯೋಜನೆಯಲ್ಲೂ ರಾಪಿಡೋವನ್ನು ಸೇರಿಸಿಕೊಳ್ಳಲಾಗಿದೆ. ಇದರಡಿ ತಂತ್ರಜ್ಞಾನ ಸಂಯೋಜನೆ, ನಗರ ಪ್ರಯಾಣದ ಸುಧಾರಣೆ ಮತ್ತು ಚಾಲಕರ ಆದಾಯದ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ.

2015ರಲ್ಲಿ ಆರಂಭವಾದ ರಾಪಿಡೋ ಪ್ರಸ್ತುತ ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ವ್ಯಾಪಿಸಿದ್ದು, ಬೈಕ್ ಟ್ಯಾಕ್ಸಿ, ಆಟೋ, ಕ್ಯಾಬ್ ಮಾತ್ರವಲ್ಲದೆ ಪಾರ್ಸೆಲ್ ಹಾಗೂ ಫುಡ್ ಡೆಲಿವರಿ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಸುಮಾರು 90 ಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಈ ಸಂಸ್ಥೆ ಆಸರೆಯಾಗಿದೆ. ಸದ್ಯದ ದರ ವಿವಾದಗಳ ನಡುವೆಯೂ ಸಿಕ್ಕಿರುವ ಈ ಐದು ವರ್ಷಗಳ ಅಧಿಕೃತ ಪರವಾನಗಿ, ರಾಪಿಡೋ ವ್ಯವಹಾರಕ್ಕೆ ದೊಡ್ಡ ಮಟ್ಟದ ಬಲ ತುಂಬಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!