BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Railway clarify on Food Safety Raid ಕರ್ನಾಟಕದ ರೈಲ್ವೆ ನಿಲ್ದಾಣಗಳಲ್ಲಿ ರಾಜ್ಯ ಸರ್ಕಾರದ ವಿಶೇಷ ಆಹಾರ ಸುರಕ್ಷತಾ ತಪಾಸಣೆ ಅಭಿಯಾನಕ್ಕೆ ನೈಋತ್ಯ ರೈಲ್ವೆಯ ಸ್ಪಷ್ಟನೆ

ಹುಬ್ಬಳ್ಳಿ,ಆಗಸ್ಟ್ 20 : ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಗಸ್ಟ್ 20, 2026 ರಂದು ರೈಲ್ವೆ ನಿಲ್ದಾಣಗಳಲ್ಲಿ ನಡೆಸಿದ ವಿಶೇಷ ಆಹಾರ ಸುರಕ್ಷತಾ ತಪಾಸಣೆಯ ಕುರಿತು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯೆಯಾಗಿ, ಪ್ರಯಾಣಿಕರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಆಹಾರ ಸೇವೆಯನ್ನು ಒದಗಿಸಲು ನೈಋತ್ಯ ರೈಲ್ವೆ (SWR) ಬದ್ಧವಾಗಿದೆ ಎಂದು ಪುನರುಚ್ಚರಿಸುತ್ತದೆ.

ರೈಲ್ವೆ ಮಂಡಳಿಯ ನಿರ್ದೇಶನದಂತೆ, ನೈಋತ್ಯ ರೈಲ್ವೆಯು ಈಗಾಗಲೇ ಎಲ್ಲಾ ವಿಭಾಗಗಳಲ್ಲಿ 14 ದಿನಗಳ ತೀವ್ರ ವಿಶೇಷ ಆಹಾರ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ. ಈ ನಿರಂತರ ಅಭಿಯಾನದ ಮೂಲಕ ಎಲ್ಲಾ ಕ್ಯಾಟರಿಂಗ್ ಮತ್ತು ವೆಂಡಿಂಗ್ ಘಟಕಗಳಲ್ಲಿ ನೈರ್ಮಲ್ಯ, ಶುಚಿತ್ವ, ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿಗಳ ಮಾನ್ಯತೆ, ಆಹಾರ ಉತ್ಪನ್ನಗಳ ಮುಕ್ತಾಯ ದಿನಾಂಕ (Expiry Date) ಮತ್ತು ಆಹಾರ ನಿರ್ವಹಣಾ ಪದ್ಧತಿಗಳ ಕುರಿತು ಸಮಗ್ರ ತಪಾಸಣೆ ನಡೆಸಲಾಗುತ್ತಿದೆ.

ನೈಋತ್ಯ ರೈಲ್ವೆಯ ಪ್ರಮುಖ ಕ್ರಮಗಳು ಮತ್ತು ಮೇಲ್ವಿಚಾರಣೆ:

ಸಮಗ್ರ ವಿಭಾಗವಾರು ವ್ಯಾಪ್ತಿ: ನೈಋತ್ಯ ರೈಲ್ವೆಯ ಕಟ್ಟುನಿಟ್ಟಾದ ಮೇಲ್ವಿಚಾರಣಾ ವ್ಯವಸ್ಥೆಯು ಬೆಂಗಳೂರು (SBC), ಮೈಸೂರು (MYS) ಮತ್ತು ಹುಬ್ಬಳ್ಳಿ (UBL) ವಿಭಾಗಗಳ ವ್ಯಾಪ್ತಿಗೆ ಬರುವ ಒಟ್ಟು 428 ಕ್ಯಾಟರಿಂಗ್ ಸಂಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ 34 ಪ್ರಮುಖ ಘಟಕಗಳು, 272 ಸಣ್ಣ ಘಟಕಗಳು, 122 ಐಆರ್‌ಸಿಟಿಸಿ (IRCTC) ಘಟಕಗಳು, 38 ಪ್ಯಾಂಟ್ರಿ ಕಾರ್‌ಗಳು ಮತ್ತು ಪ್ರಮುಖ ಬೇಸ್ ಕಿಚನ್‌ಗಳು ಸೇರಿವೆ.

ಕಠಿಣ ಕ್ರಮಗಳ ದಾಖಲೆ:

2025–26ನೇ ಹಣಕಾಸು ವರ್ಷದಲ್ಲಿ: ರೈಲ್ವೆ ಆಹಾರ ಸುರಕ್ಷತಾ ಅಧಿಕಾರಿಗಳು (FSOs) ಒಟ್ಟು 1,243 ತಪಾಸಣೆಗಳನ್ನು ನಡೆಸಿ, 129 ಸುಧಾರಣಾ ನೋಟಿಸ್‌ ಗಳನ್ನು  (Improvement Notices) ಜಾರಿಗೊಳಿಸಿದ್ದಾರೆ. ಅಲ್ಲದೆ, 528 ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು 512 ಮಾದರಿಗಳು ಸಂಪೂರ್ಣ ಗುಣಮಟ್ಟದಿಂದ ಕೂಡಿವೆ ಎಂದು ದೃಢಪಟ್ಟಿವೆ ಮತ್ತು ನಿಯಮ ಉಲ್ಲಂಘಿಸಿದ ಕಳಪೆ ಮಾದರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪ್ರಸ್ತುತ 2026–27ನೇ ಹಣಕಾಸು ವರ್ಷದಲ್ಲಿ (ಜುಲೈ 2026ರವರೆಗೆ): ರೈಲ್ವೆ ಆಹಾರ ಸುರಕ್ಷತಾ ಅಧಿಕಾರಿಗಳು 271 ತಪಾಸಣೆಗಳನ್ನು ನಡೆಸಿ, 29 ಸುಧಾರಣಾ ನೋಟುಗಳನ್ನು ನೀಡಿದ್ದಾರೆ ಹಾಗೂ 170 ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದಾರೆ (ಅನರ್ಹಗೊಂಡ 3 ಮಾದರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ).

ಇದರೊಂದಿಗೆ, ನೈಋತ್ಯ ರೈಲ್ವೆಯು 2025–26ರಲ್ಲಿ 4,373 ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿ ಒಟ್ಟು 5.22 ಲಕ್ಷ ರೂ. ದಂಡ ವಿಧಿಸಿದೆ ಹಾಗೂ ಜುಲೈ 2026ರವರೆಗೆ ಹೆಚ್ಚುವರಿಯಾಗಿ 1,377 ತಪಾಸಣೆಗಳನ್ನು ನಡೆಸಿ 64,000 ರೂ. ದಂಡ ವಿಧಿಸಿದೆ.

ನಿರಂತರ ದಂಡನಾ ಕ್ರಮಗಳು: ತಪ್ಪಾದ ಶೇಖರಣೆ, ಅನಧಿಕೃತ ಪ್ಯಾಕೇಜಿಂಗ್, ನಿಷೇಧಿತ ಆಹಾರ ಬಣ್ಣಗಳು ಮತ್ತು ಅವಧಿ ಮೀರಿದ ಸರಕುಗಳಂತಹ ನಿರ್ದಿಷ್ಟ ಅನಿಯಮಿತತೆಗಳ ಬಗ್ಗೆ ಗಮನಹರಿಸಿ, ನೈಋತ್ಯ ರೈಲ್ವೆ ಅಧಿಕಾರಿಗಳು ಗುತ್ತಿಗೆ ಮತ್ತು ದಂಡನಾ ನಿಯಮಗಳಡಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವುದು, ದಂಡ ವಿಧಿಸುವುದು ಮತ್ತು ನಿಯಮ ಉಲ್ಲಂಘಿಸುವ ಆಹಾರ ವ್ಯವಹಾರ ನಿರ್ವಾಹಕರ (FBOs) ಗುತ್ತಿಗೆಯನ್ನು ರದ್ದುಪಡಿಸುವಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ನಿಗದಿತ ಮಾನದಂಡಗಳನ್ನು ಪಾಲಿಸದ ಯಾವುದೇ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೈಋತ್ಯ ರೈಲ್ವೆ ಸದಾ ಸಿದ್ಧವಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!