BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Puttur ಉಪ್ಪಿನಂಗಡಿಯ ಕೂಟೇಲು -ಸುಬ್ರಹ್ಮಣ್ಯ ಕ್ರಾಸ್ ಬಳಿಯ ಹೈವೇ ರಸ್ತೆಯ ಗೊಂದಲ ಪರಿಹಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚನೆ


ಪುತ್ತೂರು, ಆಗಸ್ಟ್ 11 : ಉಪ್ಪಿನಂಗಡಿಯ ಕೂಟೇಲು -ಸುಬ್ರಹ್ಮಣ್ಯ ಕ್ರಾಸ್ ಬಳಿಯ ಹೈವೇ ರಸ್ತೆಯ ಗೊಂದಲ ಪರಿಹಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚನೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಇಂಜಿನಿಯರ್ ಹಾಗು ಪ್ರಸನ್ನ ದರ್ಬೆ  ಅವರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.  ಇಂಜಿನಿಯರ್ ರವರು ಸಮಸ್ಯೆಯ ಕುರಿತು ತನಗೆ ಮನವರಿಯಾಗಿದ್ದು ಇದನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ರಸ್ತೆಯ ಸಮಸ್ಯೆಯನ್ನು ಬಗೆಹರಿಸಿ ರಸ್ತೆ ಅಗಲೀಕರಣ ಮಾಡುವುದಾಗಿ ಸ್ಥಳೀಯ ನಾಗರಿಕರಿಗೆ ಭರವಸೆ ನೀಡಿದ್ದಾರೆ.  ಈ ಬಗ್ಗೆ ತಕ್ಷಣ ಸ್ಪಂದಿಸಿದ ಜಿಲ್ಲೆಯ ಕ್ರಿಯಾಶೀಲ, ಹೆಮ್ಮೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಆ ಭಾಗದ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಉಪ್ಪಿನಂಗಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಸುರೇಶ್ ಅತ್ರಮಜಲ್, ಪುತ್ತೂರು ಬಿಜೆಪಿ ಯುವ ಮೋರ್ಚಾ ದ ಪ್ರಧಾನ ಕಾರ್ಯದರ್ಶಿ ಆದೇಶ ಶೆಟ್ಟಿ, ಹಿರಿಯರಾದ ಜಯಂತ್ ಪುರೋಲಿ, ಸ್ಥಳೀಯರಾದ ಪ್ರತಾಪ್ ಪೆರಿಯಡ್ಕ, ಧರ್ಮಪ್ಪ ನಾಯ್ಕ ಸುಚಿತ್, ಉದಿತ್ ರಂಗಜೆ, ಗಿರೀಶ್, ಪ್ರಶಾಂತ್ ರಾಮಕುಂಜ, ನವೀನ್, ಹರೀಶ್ ಪಟ್ಲ  ಇವರುಗಳು ಉಪಸ್ಥಿತರಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!