BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ

Puttur Xerox clash ಪುತ್ತೂರು: ದರ್ಬೆಯಲ್ಲಿ ಜನಸೇವಾ ಕೇಂದ್ರದ ಬಳಿ ದಾಖಲಾತಿ ವಿಚಾರವಾಗಿ ಗಲಾಟೆ – ಪರಸ್ಪರ ಮೂರು ಪ್ರಕರಣ ದಾಖಲು


ಪುತ್ತೂರು, ಆಗಸ್ಟ್ 22 :  ಪುತ್ತೂರು ನಗರ ಠಾಣಾ ವ್ಯಾಪ್ತಿಯ ದರ್ಭೆಯಲ್ಲಿರುವ ಜನಸೇವಾ ಕೇಂದ್ರವೊಂದರಲ್ಲಿ ಲ್ಯಾಮಿನೇಷನ್ ಗಾಗಿ ನೀಡಿದ್ದ ದಾಖಲಾತಿ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆಯು ವಿಕೋಪಕ್ಕೆ ತಿರುಗಿ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಕರಣ-01: ಯುವತಿ ನೀಡಿದ ದೂರು

  • ದೂರುದಾರರು: ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32).

  • ಘಟನೆ: ಆಗಸ್ಟ್ 21ರಂದು ಮಧ್ಯಾಹ್ನ ದರ್ಭೆಯಲ್ಲಿರುವ 'ಡ್ರೀಮ್ ಡೆಸ್ಟಿನೇಶನ್' ಜನಸೇವಾ ಕೇಂದ್ರಕ್ಕೆ ಫಾತಿಮತ್ ಮಿಸ್ವಾನ ಅವರು ತಮ್ಮ ಸಹೋದರ ಮತ್ತು ತಂಗಿಯೊಂದಿಗೆ ದಾಖಲಾತಿಗಳ ಪ್ರಿಂಟ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ವಾಪಸ್ ಪಡೆಯುವಾಗ ಅದರಲ್ಲಿ ಒಂದು ದಾಖಲಾತಿ ಹಾನಿಯಾಗಿತ್ತು.

  • ವಿವಾದ: ಈ ಬಗ್ಗೆ ಪ್ರಶ್ನಿಸಿ, ದಾಖಲೆಯನ್ನು ಸರಿಪಡಿಸಿ ಕೊಡಿ ಅಥವಾ ಹೊಸ ದಾಖಲೆಗೆ 300 ರೂ. ನೀಡಿ ಎಂದು ಕೇಳಿದಾಗ ಅಂಗಡಿಯಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ಪ್ರಸ್ತುತ ಸ್ಥಿತಿ: ಗಾಯಾಳುಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 97/2026, ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ಸುದರ್ಶನ ಪೈ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಡರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣ-02: ಜನಸೇವಾ ಕೇಂದ್ರದ ಮಾಲಕಿ ನೀಡಿದ ಪ್ರತಿದೂರು 

  • ದೂರುದಾರರು: ಪುತ್ತೂರು ಕಸಬಾ ನಿವಾಸಿ ಅಂಜನಾ ಎಸ್. ಪೈ (50).

  • ಘಟನೆ: ತಮ್ಮ ಜನಸೇವಾ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದ ದಾಖಲಾತಿಯೊಂದು ಹಾನಿಯಾಗಿದೆ ಎಂದು ಸಿಬ್ಬಂದಿ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದಾಗ, ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಗಲಾಟೆ ನಡೆಸಿ 10,000 ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರೆ.

  • ಹಲ್ಲೆ ಆರೋಪ: ಸಮಾಧಾನಪಡಿಸಲು ಯತ್ನಿಸಿದರೂ ಅವರು ವಿಡಿಯೋ ಮಾಡಲು ಯತ್ನಿಸಿ, ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ಪ್ರಸ್ತುತ ಸ್ಥಿತಿ: ಪಾತಿಮಾತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ಎಂಬವರ ವಿರುದ್ಧ ಅ.ಕ್ರ: 98/2026 ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ-03: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ 

  • ಘಟನೆ: ದರ್ಭೆ ಜಂಕ್ಷನ್ ಬಳಿ ಜನಸೇವಾ ಕೇಂದ್ರದ ಎದುರು ಸಾರ್ವಜನಿಕರು ಸೇರಿ ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜನರನ್ನು ಚದುರಿಸಲು ಯತ್ನಿಸಿದ್ದಾರೆ.

  • ಕರ್ತವ್ಯಕ್ಕೆ ಅಡ್ಡಿ: ಗಲಾಟೆಗೆ ಸಂಬಂಧಿಸಿದಂತೆ ಕೆಲವರನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಯಾಝ್, ನೌಶಾದ್ ಹಾಗೂ ಇತರರು ತಡೆದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

  • ಪ್ರಸ್ತುತ ಸ್ಥಿತಿ: ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 99/2026 ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!