Pradeep singh Rawat ‘ಮಹಾಭಾರತ’ ಧಾರಾವಾಹಿಯ ಅಶ್ವತ್ಥಾಮ ಖ್ಯಾತಿಯ ನಟ ಪ್ರದೀಪ್ ಸಿಂಗ್ ರಾವತ್ ನಿಧನ
ಸುದ್ದಿವಾಣಿ
8/05/2026 09:06:00 AM
ಮುಂಬೈ, ಆಗಸ್ಟ್ 05 : ಕನ್ನಡ, ಹಿಂದಿ ಸೇರಿದಂತೆ ಆನೇಕ ಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ಖ್ಯಾತ ನಟ ಪ್ರದೀಪ್ ಸಿಂಗ್ ರಾವತ್ ಅವರು ಮಂಗಳವಾರ ನಿಧನರಾದರು. 74 ವರ್ಷದ ಅವರು ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾವತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಅವರು ಮೃತಪಟ್ಟರು. ತೆಲುಗು, ಹಿಂದಿ ಮತ್ತು ತಮಿಳು ಚಿತ್ರರಂಗಗಳಲ್ಲಿ ಅಭಿನಯಿಸಿದ್ದ ರಾವತ್, ನೇಪಾಳಿ ನಿರ್ದೇಶಕ ಚಂದ್ರ ಪಂತ್ ನಿರ್ದೇಶನದ ‘ಆಬಾತ್ ಆಮಾ’ ಹಾಗೂ ‘ಹ್ರಸ್ವಾ ದೀರ್ಘಾ’ ಚಿತ್ರಗಳಲ್ಲಿಯೂ ನಟಿಸಿದ್ದರು. ದೂರದರ್ಶನದ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರ ನಿರ್ವಹಿಸಿದ್ದ ಅವರು, ‘ಸರ್ಫರೋಶ್’, ‘ಲಗಾನ್’ ಮತ್ತು ‘ಗಜನಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆ ಗಳಿಸಿದ್ದರು. ರಾವತ್ ಅವರು ನೇಪಾಳಿ ಚಿತ್ರಗಳಾದ ‘ಆಬಾತ್ ಆಮಾ’ ಮತ್ತು ‘ಆಬಾತ್ ಆಮಾ–2’ ಚಿತ್ರಗಳಲ್ಲಿ ನಟಿ ವಿಪನಾ ಥಾಪಾ ಅವರೊಂದಿಗೆ ಅಭಿನಯಿಸಿದ್ದರು. ರಾವತ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕ ನಟರು, ಸಿನಿಮಾ ರಂಗದ ದಿಗ್ಗಜರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.