BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

NITK Surathkal ಸುರತ್ಕಲ್ ಎನ್‌ಐಟಿಕೆಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆ;1.75 ರೂ ಕೋಟಿ ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರ ಅನಕ್ಸ್ ಕಟ್ಟಡಕ್ಕೆ ಶಂಕುಸ್ಥಾಪನೆ..!


ಸುರತ್ಕಲ್, ಆಗಸ್ಟ್ 12 : ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಎನ್‌ಐಟಿಕೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ಸೌಲಭ್ಯಕ್ಕಾಗಿ ಹಳೆಯ ವಿದ್ಯಾರ್ಥಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸಂಸ್ಥೆಯ 67ನೇ ಸ್ಥಾಪನಾ ದಿನಾಚರಣೆಯ ಸಂಭ್ರಮದಲ್ಲಿ, ನೂತನ ಆರೋಗ್ಯ ಕೇಂದ್ರ ಅನಕ್ಸ್ ಕಟ್ಟಡಕ್ಕೆ ಅದ್ದೂರಿಯಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು ನೂತನ ಕಟ್ಟಡಕ್ಕೆ ಅಡಿಪಾಯ ಹಾಕಿದರು. ಈ ಕಾರ್ಯಕ್ರಮದಲ್ಲಿ ಐಐಟಿ ಧಾರವಾಡದ ನಿರ್ದೇಶಕ ಪ್ರೊ. ವೆಂಕಪ್ಪಯ್ಯ, ಉಪ ನಿರ್ದೇಶಕ ಪ್ರೊ. ಸುಭಾಷ್ ಸಿ. ಯರಗಲ್ ಸೇರಿದಂತೆ ವಿವಿಧ ಡೀನ್‌ಗಳು, ಅಧ್ಯಾಪಕರು ಹಾಗೂ 1972 ಮತ್ತು 1986ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಯೋಜನೆಗೆ ಒಟ್ಟು ₹1,75,10,554 ಹಳೆಯ ವಿದ್ಯಾರ್ಥಿಗಳ ಕೊಡುಗೆ ಲಭಿಸಿದೆ. 1986 ಬ್ಯಾಚ್ ₹1,01,76,002 ಕೊಡುಗೆಯೊಂದಿಗೆ ಅತಿ ದೊಡ್ಡ ದಾನಿಯಾಗಿ ಹೊರಹೊಮ್ಮಿದೆ. 1972 ಬ್ಯಾಚ್ ₹29,00,001 ನೀಡಿದೆ. ಇತರ ಬ್ಯಾಚ್‌ಗಳು ಹಾಗೂ ವೈಯಕ್ತಿಕ ದಾನಿಗಳಿಂದ ಹೆಚ್ಚುವರಿ ಸಹಾಯ ದೊರಕಿದೆ.

ಸುಮಾರು 3,100 ಚದರ ಅಡಿ ವಿಸ್ತೀರ್ಣದಲ್ಲಿ ಈ ನೂತನ ಅನಕ್ಸ್ ಕಟ್ಟಡ ತಲೆಎತ್ತಲಿದೆ. ತಳಮಹಡಿಯಲ್ಲಿ ತುರ್ತು ಚಿಕಿತ್ಸಾ ಕೊಠಡಿ, ಇಸಿಜಿ, ನೆಬ್ಯುಲೈಸೇಶನ್ ಹಾಗೂ ಆಂಬುಲೆನ್ಸ್ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಹಾಗೆಯೇ ಮೊದಲ ಮಹಡಿಯಲ್ಲಿ ಫಿಸಿಯೋಥೆರಪಿ, ತಜ್ಞ ವೈದ್ಯರ ಸಲಹಾ ಕೊಠಡಿಗಳು ಹಾಗೂ ಸಭಾ ಕೊಠಡಿ ಸೇರಿದಂತೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲಿದೆ. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳು ಇರಲಿದೆ. ಇದು ಕ್ಯಾಂಪಸ್‌ನ ಆರೋಗ್ಯ ಸೇವೆಗೆ ಮತ್ತಷ್ಟು ಬಲ ತುಂಬಲಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!