BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Miracle at Lady Goschen Hospital, Mangaluru ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಮಹಾಅದ್ಭುತ: ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ 28 ವಾರಗಳ ಗರ್ಭಿಣಿ ಹಾಗೂ ಮಗುವಿನ ಜೀವ ರಕ್ಷಣೆ..!


ಬಡವರ ಸಂಜೀವಿಣಿ ಪಡೆದ ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಮಹಾಅದ್ಭುತ ಘಟಿಸಿದ್ದು ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ 28 ವಾರಗಳ ಗರ್ಭಿಣಿ ಹಾಗೂ ಮಗುವಿನ ಜೀವ ರಕ್ಷಣೆಯಾಗಿದೆ. 
ಮಂಗಳೂರು,ಆಗಸ್ಟ್ 29 :ಬಡವರ ಸಂಜೀವಿಣಿ ಪಡೆದ ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಮಹಾಅದ್ಭುತ ಘಟಿಸಿದ್ದು ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ 28 ವಾರಗಳ ಗರ್ಭಿಣಿ ಹಾಗೂ ಮಗುವಿನ ಜೀವ ರಕ್ಷಣೆಯಾಗಿದೆ. 

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ 28 ವಾರಗಳ ಗರ್ಭಿಣಿ ಮಹಿಳೆಯೊಬ್ಬರು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಅವರ ಜೀವಕ್ಕೆ ಎದುರಾಗಿದ್ದ ಗಂಭೀರ ಅಪಾಯವನ್ನು ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪರೆಯ ವೈದ್ಯರ ತಂಡ ಯಶಸ್ವಿಯಾಗಿ ಎದುರಿಸಿದೆ. ಹಲವು ವಿಭಾಗಗಳ ತಜ್ಞ ವೈದ್ಯರ ಸಂಘಟಿತ ಪ್ರಯತ್ನದಿಂದ ಈ ಜಟಿಲ ಕಾರ್ಯಾಚರಣೆ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಅರಿತ ಆಸ್ಪತ್ರೆಯು ತಕ್ಷಣವೇ ಅವರನ್ನು ಲೇಡಿಗೋಷನ್‌ ಆಸ್ಪತ್ರೆಗೆ ರವಾನಿಸಿತು. ಇಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯ ಉದರದೊಳಗೆ ಆಂತರಿಕ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಗಿದ್ದು, ಕೂಡಲೇ ತುರ್ತು ಚಿಕಿತ್ಸೆಗೆ ಮುಂದಾಗಲಾಯಿತು.

ಜೀವಕ್ಕೆ ಕಂಟಕವಾಗಿದ್ದ ಜಟಿಲ ಸಮಸ್ಯೆಗಳು:

ವೈದ್ಯಕೀಯ ಪರಿಶೀಲನೆಯ ವೇಳೆ ಹಿಂದಿನ ಸಿಸೇರಿಯನ್‌ ಗಾಯದ ಭಾಗವು ದುರ್ಬಲಗೊಂಡು, ಗರ್ಭಕೋಶದ ಗೋಡೆಗೆ ಹಾನಿಯಾಗಿರುವುದು ಕಂಡುಬಂತು. ಇದರೊಂದಿಗೆ ಪ್ಲಾಸೆಂಟಾ (ಮറുಕಟ್ಟು) ಗರ್ಭಕೋಶದ ಗೋಡೆಯನ್ನು ಮೀರಿ ಬೆಳೆಯುವ ‘ಪ್ಲಾಸೆಂಟಾ ಪಕ್ರೀಟಾ’ (Placenta Accreta) ಎಂಬ ಅತ್ಯಂತ ಅಪಾಯಕಾರಿ ಸ್ಥಿತಿಯೂ ದೃಢಪಟ್ಟಿತು. ಈ ಸ್ಥಿತಿಯಿಂದಾಗಿ ಶಸ್ತ್ರಚಿಕಿತ್ಸೆ ವೇಳೆ ಭಾರಿ ರಕ್ತಸ್ರಾವ ಉಂಟಾಗಿ, ಮೂತ್ರಕೋಶ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಅಂಗಗಳಿಗೆ ಹಾನಿಯಾಗುವ ಗಂಭೀರ ಅಪಾಯವಿತ್ತು.

ಮಲ್ಟಿಡಿಸಿಪ್ಲಿನರಿ ಅಪ್ರೋಚ್‌ (ಜೀವ ರಕ್ಷಣಾ ಮಾದರಿ):

ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಪ್ರಸೂತಿ ತಜ್ಞರು, ಜನರಲ್‌ ಸರ್ಜನ್‌, ಮೂತ್ರರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ವಿಶೇಷ ತರಬೇತಿ ಪಡೆದ ಶುಶ್ರೂಷಕರನ್ನೊಳಗೊಂಡ ಮಲ್ಟಿಡಿಸಿಪ್ಲಿನರಿ ತಂಡವು ಪೂರ್ವಯೋಜನೆಯೊಂದಿಗೆ ಸಜ್ಜಾಯಿತು. ಶಸ್ತ್ರಚಿಕಿತ್ಸೆಗಾಗಿ ಮುಂಚಿತವಾಗಿಯೇ ಸುಮಾರು ಮೂರೂವರೆ ಲೀಟರ್‌ ರಕ್ತಕ್ಕೆ ಸಮನಾದ ವಿವಿಧ ರಕ್ತ ಘಟಕಗಳನ್ನು ಸಿದ್ಧಪಡಿಸಿಡಲಾಗಿತ್ತು.

ಬೆಳಿಗ್ಗೆ 5ರಿಂದ 9 ಗಂಟೆಯವರೆಗೆ ಸತತ ನಾಲ್ಕು ಗಂಟೆಗಳ ಕಾಲ ನಡೆದ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವ ನಿಯಂತ್ರಣ, ಪ್ಲಾಸೆಂಟಾ ನಿರ್ವಹಣೆ, ಮೂತ್ರಕೋಶದ ಸುರಕ್ಷತೆ ಮತ್ತು ತಾಯಿಯ ಆರೋಗ್ಯದ ನಿರಂತರ ನಿಗಾ ವಹಿಸಿ ಯಶಸ್ವಿಯಾಗಿ ಜೀವ ರಕ್ಷಿಸಲಾಯಿತು.

ಯಶಸ್ಸಿನ ಹಿಂದೆ ದೊಡ್ಡ ವೈದ್ಯರ ಪಡೆ:

ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್‌ ಎಂ.ಆರ್. ಅವರ ಸಮರ್ಥ ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ಈ ಕಾರ್ಯಾಚರಣೆ ನಡೆಯಿತು. ವೈದ್ಯಾಧಿಕಾರಿ ಡಾ. ಜಗದೀಶ್‌ ಹಾಗೂ ಹಿರಿಯ ಪ್ರಸೂತಿ ತಜ್ಞ ಡಾ. ದಯಾನಂದ್‌ ಪ್ರಮುಖ ಪಾತ್ರ ವಹಿಸಿದರು. ಕೆಎಂಸಿಯ ಪ್ರಸೂತಿ ತಜ್ಞರಾದ ಡಾ. ಭಾರತಿ ಹಾಗೂ ಡಾ. ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞರಾದ ಡಾ. ಸದಾನಂದ ಪೂಜಾರಿ ಮತ್ತು ಡಾ. ಪ್ರಮೋದ್‌, ಜನರಲ್‌ ಸರ್ಜನ್‌ ಡಾ. ಅಕ್ಷಿತ್‌, ಅರಿವಳಿಕೆ ತಜ್ಞರಾದ ಡಾ. ರಂಜನ್‌ ಹಾಗೂ ಡಾ. ರಕ್ಷಿತಾ ಅವರ ಸೇವೆ ಮಹತ್ವದ್ದಾಗಿತ್ತು.

ಜೊತೆಗೆ ಶುಶ್ರೂಷಕ ತಂಡದ ಜಲಜ, ಅಶ್ವಿನಿ, ವಿನೀತಾ, ರೇವತಿ ಮತ್ತು ಸಿಂಧು ಅವರು ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಆಂಬ್ಯುಲೆನ್ಸ್‌ ಚಾಲಕ ಹರೀಶ್‌ ಅವರ ಕೊಡುಗೆಯೂ ಗಮನಾರ್ಹವಾಗಿತ್ತು.



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!