Manipal Crime ರೀಲ್ಸ್ ಮೋಜಿಗಾಗಿ ಮಣಿಪಾಲ ಪಬ್ಲಿಕ್ ರೋಡಲ್ಲಿ ಅಪಾಯಕಾರಿ ಬೈಕ್ ಸ್ಟಂಟ್, ಯುವಕನ ಮೇಲೆ ಪ್ರಕರಣ ದಾಖಲು
ಸುದ್ದಿವಾಣಿ
8/06/2026 05:12:00 PM
ಮಣಿಪಾಲ, ಆಗಸ್ಟ್ 06 : ರೀಲ್ಸ್ ಮೋಜಿಗಾಗಿ ಪಬ್ಲಿಕ್ ರೋಡಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿ ಯುವಕನ ಮೇಲೆ ಮಣಿಪಾಲ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಉಡುಪಿಯ ಶಿವಳ್ಳಿ ಗ್ರಾಮ, ಪೆರಂಪಳ್ಳಿ ಸಾಯಿರಾಧ ವಿಲ್ಲಾ ಎದುರು ಮಣಿಪಾಲ - ಅಂಬಾಗಿಲು ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಅನ್ನು ಅಪಾಯಕಾರಿಯಾಗಿ ಜಂಪ್ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕ ಆರೋಪಿ ಮೋಹಿತ್ ಸ್ವರೂಪ್ ಮೇಲೆ ಪೋಲಿಸರು ಕ್ರಮ ಜರುಗಿಸಿದ್ದಾರೆ. ಆತನ ಬೈಕನ್ನು ವಶ ಪಡಿಸಿಕೊಂಡಿದ್ದಾರೆ. ಮೋಹಿತ್ ಸ್ವರೂಪ್ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ತಮ್ಮ ಬುಲೆಟ್ ಬೈಕ್ ಅನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾರೆ. ರಸ್ತೆಯ ಮಧ್ಯೆ ಬೈಕ್ ಅನ್ನು ಒಮ್ಮೆಲೆ ಜಂಪ್ ಮಾಡಿ ಹಾರಿಸಿ ಸಾರ್ವಜನಿಕರಿಗೆ ಅಪಾಯ ಉಂಟು ಮಾಡಿದ್ದಾರೆ. ಈ ದೃಶ್ಯವನ್ನು ವಿಡಿಯೋ ಮಾಡಿ 02/08/2026 ರಂದು ಮಧ್ಯಾಹ್ನ 2:00ಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಆಗಿ ಹರಿದಾಡಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ127/2026 ರಂತೆ ಪ್ರಕರಣ ದಾಖಲಾಗಿದೆ. ರೀಲ್ಸ್ ಮತ್ತು ವ್ಯೂಸ್‌ಗಾಗಿ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವುದು ಅಪರಾಧವಾಗಿದ್ದು ಇಂತಹ ಕೃತ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಣಿಪಾಲ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಟ್ಯಾಗ್ಗಳು:
ಉಡುಪಿ
