BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Manipal Crime ಮಣಿಪಾಲದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ, ನಿಟ್ಟೆಯ ನಾಲ್ವರು ಇಂಜಿನೀಯರಿಂಗ್ ಸ್ಟೂಡೆಂಡ್ಸ್ ಅರೆಸ್ಟ್..!


ಉಡುಪಿ,ಆಗಸ್ಟ್ 04 :  ಉಡುಪಿ ಮಣಿಪಾಲದಲ್ಲಿ ಯುವಕನೋರ್ವನಿಗೆ ಗಂಭೀರ ಹಲ್ಲೆ ನಡೆಸಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರು  ನಿಟ್ಟೆಯ ಎಂಜಿನಿಯರಿಂಗ್‌ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಾಗಿದ್ದಾರೆ. ಶಿವಮೊಗ್ಗ ಮೂಲದ ಅಕ್ಷಯ್‌ ಎ. (21), ಪುನೀತ್‌ ಎಸ್‌. (21), ಶಮಂತ್‌ ಕೆ.ಆರ್‌. (21) ಹಾಗೂ ಯಶವಂತ್‌ ಬಿ.ಜೆ. (21)  ಬಂಧಿತ ಆರೋಪಿಗಳಾಗಿದ್ದಾರೆ.

ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಗಸ್ಟ್‌ 2ರ ರಾತ್ರಿ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್‌ ಸಮೀಪ ಯಶ್‌ರಾಜ್‌ ಅವರು ತಮ್ಮ ಪವನ್‌ ಕುಮಾರ್‌ ಹಾಗೂ ಸ್ನೇಹಿತ ಶ್ರೇಯಸ್‌ ಜೊತೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ, ಎರಡು ಕಾರುಗಳಲ್ಲಿ ಬಂದ ಈ ನಾಲ್ವರು ಆರೋಪಿಗಳು ಪವನ್‌ ಕುಮಾರ್‌ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ  ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಮೆಟಲ್‌ ಪಂಚ್‌ನಿಂದ ಮುಖಕ್ಕೆ ಗುದ್ದಿ ಮೂಗಿಗೆ ಗಂಭೀರ ಗಾಯಗೊಳಿಸಿದ್ದರು. ಇದೇ ವೇಳೆ ಯಶ್‌ರಾಜ್‌ ಹಾಗೂ ಶ್ರೇಯಸ್‌ ಮೇಲೂ ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದು, ಜೀವ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.ಈ ಸಂಬಂಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!