BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರು: ಹಿಂದೂಪರ ಸಂಘಟನೆಗಳ ‘ಪುತ್ತೂರು ಚಲೋ’ – ಪುತ್ತೂರಿನ ನೊಂದ ಹಿಂದೂ ಮಹಿಳೆ ಪೂಜಾಗೆ ಮೊದಲು ನ್ಯಾಯ ಕೊಡಿಸಿ ; ಪ್ರತಿಭಾ ಕುಳಾಯಿ ಸವಾಲು


ಮಂಗಳೂರು, ಆಗಸ್ಟ್ 31: ಹಿಂದೂಪರ ಸಂಘಟನೆಗಳ ಸೋಮವಾರ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದ ಬಗ್ಗೆ ಪ್ರತಿಕ್ರೀಯೇ ನೀಡಿರುವ ಮಹಿಳಾ ಹೋರಾಟಗಾರ್ತಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಪುತ್ತೂರಿನ ನೊಂದ ಹಿಂದೂ ಮಹಿಳೆ ಪೂಜಾಗೆ ಮೊದಲು ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮುಖಂಡರು ಮತ್ತು ಹಿಂದೂಪರ ಸಂಘಟನೆಗಳು ಆಯೋಜಿಸಿರುವ ‘ಪುತ್ತೂರು ಚಲೋ’ ಕಾರ್ಯಕ್ರಮದ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಧರ್ಮ, ಜಾತಿ ಅಥವಾ ಪಕ್ಷದ ಮಹಿಳೆಗೆ ಅನ್ಯಾಯವಾದರೂ ತಾನು ಅವರ ಪರವಾಗಿ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ಪುತ್ತೂರು ಚಲೋ’ಗೆ ತನ್ನನ್ನು ಸವಾಲು ಹಾಕಲಾಗಿದೆ ಎಂದು ಆರೋಪಿಸಿದ ಅವರು, ಪೂಜಾ ಅವರಿಗೆ ಅನ್ಯಾಯವಾದಾಗ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರು ಯಾವುದೇ ಹೋರಾಟ ನಡೆಸಿಲ್ಲ ಎಂದು ತೀವ್ರವಾಗಿ ಟೀಕಿಸಿದರು.‘ಪುತ್ತೂರು ಚಲೋ’ ದಿನಾಂಕ ನಿಗದಿಯಾದರೆ ತಾನೂ ಅದರಲ್ಲಿ ಭಾಗವಹಿಸಲು ಸಿದ್ಧಳಿದ್ದು, ಪ್ರತಿಭಟನೆ ಮುಗಿದ ಬಳಿಕ ಪೂಜಾ ಅವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿಯೂ ಹೋರಾಟ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಪುತ್ತೂರಿನ ಸಂತ್ರಸ್ಥೆ ಪೂಜಾ ಅವರಿಗೆ ನ್ಯಾಯಾಲಯದ ಆದೇಶದಂತೆ ಮಾಸಿಕ ₹75 ಸಾವಿರ ದೊರೆಯುತ್ತಿದ್ದರೂ, ಕೇವಲ ಹಣ ಮಾತ್ರ ಪರಿಹಾರವಲ್ಲ; ಬದಲಿಗೆ ಅವರ ಹಾಗೂ ಮಗುವಿನ ಭವಿಷ್ಯವೇ ಅತ್ಯಂತ ಮುಖ್ಯ ಎಂದು ಪ್ರತಿಭಾ ಕುಳಾಯಿ ಅಭಿಪ್ರಾಯಪಟ್ಟಿದ್ದಾರೆ.

https://youtu.be/MmEVWqM4DIg

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!