BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru| ಮಳೆ ರಜೆಯಲ್ಲಿ ಗಮ್ಮತ್ ಮಾಡಿದ್ದ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್, ನಷ್ಟವಾದ ಬೋಧನಾ ಅವಧಿ ಸರಿದೂಗಿಸಲು ಶನಿವಾರ ಪೂರ್ಣ ದಿನ ಶಾಲೆ ಜೊತೆಗೆ ಸಂಜೆ ಸ್ಪೆಶಲ್ ಕ್ಲಾಸ್..!


ಮಂಗಳೂರು, ಆಗಸ್ಟ್ 22 :  ಭಾರಿ ಮಳೆ ಕಾರಣ ಸಿಕ್ಕಿದ ರಜೆಯಲ್ಲಿ ಗಮ್ಮತ್ ಮಾಡಿದ್ದ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್ ಬಂದಿದೆ.  ಮಳೆ ರಜೆ ಅವಧಿಯಲ್ಲಿ ನಷ್ಟವಾದ ಬೋಧನಾ ಅವಧಿ ಸರಿದೂಗಿಸಲು ಶನಿವಾರ ಪೂರ್ಣ ದಿನ ಶಾಲೆ ನಡೆಸಲು ಡಿಸಿಪಿಐ ಆದೇಶ ಮಾಡಿದ್ದಾರೆ. ಜೊತೆಗೆ ಪ್ತಿದಿನ ಸಂಜೆ ಸ್ಪೆ಼ಶಲ್ ಕ್ಲಾಸ್  ಕೂಡ ಇರಲಿದೆ. 

ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಲೆಗಳಿಗೆ ರಜೆ ಘೋಷಿಸಿತ್ತು. ಇದರಿಂದ ಉಂಟಾಗಿರುವ ಬೋಧನಾ ಅವಧಿಯ ಕೊರತೆಯನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (DDPI) ಕಚೇರಿಯಿಂದ ಅಧಿಕೃತ ಆದೇಶ ಹಾಗೂ ತಿದ್ದುಪಡಿ ಜ್ಞಾಪನ ಹೊರಡಿಸಲಾಗಿದೆ.

ಸೆಪ್ಟೆಂಬರ್ 2026ರ 2ನೇ ಶನಿವಾರದಿಂದ ಹೆಚ್ಚುವರಿ ಬೋಧನಾ ಅವಧಿಗಳನ್ನು ಕಡ್ಡಾಯವಾಗಿ ನಡೆಸುವುದು. ಶನಿವಾರದಂದು ಅಪರಾಹ್ನವೂ ಸೇರಿದಂತೆ ಪೂರ್ಣಾವಧಿ ತರಗತಿಗಳನ್ನು ನಡೆಸುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರ ದಿನಗಳಲ್ಲಿ ಸಂಜೆಯ ವೇಳೆ ಒಂದು ಹೆಚ್ಚುವರಿ ಬೋಧನಾ ಅವಧಿಯನ್ನು ನಡೆಸಿ ಪಠ್ಯ ಪೂರ್ಣಗೊಳಿಸುವುದು.

ಪ್ರತಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ (SDMC) ಪದಾಧಿಕಾರಿಗಳು ಸಭೆ ನಡೆಸಿ, ಶಾಲಾವಾರು ನಷ್ಟವಾದ ದಿನಗಳನ್ನು ಲೆಕ್ಕಹಾಕಿ, ವೇಳಾಪಟ್ಟಿಯಲ್ಲಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನೆ ಸರಿದೂಗಿಸಲು ಸೂಚಿಸಲಾಗಿದೆ.

ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿರ್ದೇಶನವನ್ನು ತಮ್ಮ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಡಿಪಿಐ ನಿರ್ದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!