BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಹಿರಿಯ ವಕೀಲ ಜಿ.ಕೆ. ಪರಮೇಶ್ವರ ಜೋಯಿಸ್ ನಿಧನ


ಮಂಗಳೂರು, ಆಗಸ್ಟ್ 15: ಹಿರಿಯ ವಕೀಲ ಜಿ.ಕೆ. ಪರಮೇಶ್ವರ ಜೋಯಿಸ್ (G K Parameshwara Jois) ಅವರು ಶನಿವಾರ ನಿಧನ ಹೊಂದಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪೆರುವಾಯಿ ಗೌರಿಮೂಲೆಯ ತಮ್ಮ ತವರು ಮನೆಯಲ್ಲಿ ಅಪರಾಹ್ನ 1.52 ರ ಸುಮಾರಿಗೆ  ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಅಲ್ಪಕಾಲದ ಅನಾರೋಗ್ಯವಿತ್ತು ಎನ್ನಲಾಗಿದೆ.  ಅವರ ಅಂತ್ಯಸಂಸ್ಕಾರವು ಇಂದು ಸಂಜೆ 6 ಗಂಟೆಯ ಬಳಿಕ ಗೌರಿಮೂಲೆ, ಪೆರುವಾಯಿ ನಡೆಯಲಿದೆ.

ಮಂಗಳೂರು ಬಾರ್ ಅಸೋಸಿಯೇಷನ್‌ನ (Mangalore Bar Association) ಹಿರಿಯ ಸದಸ್ಯರಾಗಿ ಜಿ.ಕೆ. ಪರಮೇಶ್ವರ ಜೋಯಿಸ್ ಅವರು ಕಾನೂನು ಕ್ಷೇತ್ರದಲ್ಲಿ ದೀರ್ಘಾವಧಿಯ ಅನುಭವವನ್ನು ಹೊಂದಿದ್ದರು. 1977 ರಿಂದ ಮಂಗಳೂರು ಭಾಗದಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಇವರು ಹಲವು ಯುವ ನ್ಯಾಯವಾದಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದು, ಅವರೆಲ್ಲರೂ ಇಂದು ನ್ಯಾಯಾಂಗ ಮತ್ತು ವಕೀಲಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಜಿ.ಕೆ. ಪರಮೇಶ್ವರ ಜೋಯಿಸ್ ನಿಧನಕ್ಕೆ ಮಂಗಳೂರು ಬಾರ್ ಅಸೋಸಿಯೇಷನ್‌ ಸಹಿತ ಹಿರಿಯ ಹಾಗೂ ಕಿರಿಯ ವಕೀಲರು, ನ್ಯಾಯವಾದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!