BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru | ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಆದರ್ಶಗಳು ಇಂದಿನ ಪೀಳಿಗೆಗೆ ದಾರಿದೀಪ: ಮಾಜಿ ಸಚಿವ ಬಿ. ರಮಾನಾಥ ರೈ


ಮಂಗಳೂರು, ಆಗಸ್ಟ್ 20 :ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಚಿಂತನೆ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ತುರ್ತು ಅಗತ್ಯವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ಗಾಂಧಿಯವರು ಯುವಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿ, ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ತೋರಿದ ದೂರದೃಷ್ಟಿಯ ನಾಯಕ ಎಂದು ಸ್ಮರಿಸಿದ ಅವರು, ದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಕುರಿತು ಅಂದು ಅವರು ಕಂಡ ಕನಸುಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಅದೇ ರೀತಿಯಾಗಿ, ಡಿ. ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಪರವಾಗಿ ಐತಿಹಾಸಿಕ ಹೆಜ್ಜೆಗಳನ್ನು ಇಟ್ಟ ಜನನಾಯಕ ಎಂದು ಬಣ್ಣಿಸಿದ ರಮಾನಾಥ ರೈ, ಭೂ ಸುಧಾರಣೆ ಸೇರಿದಂತೆ ಅನೇಕ ಜನಪರ ಕ್ರಮಗಳ ಮೂಲಕ ಬಡವರು, ಹಿಂದುಳಿದ ಹಾಗೂ ಶೋಷಿತ ವರ್ಗಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಅವಕಾಶಗಳನ್ನು ಕಲ್ಪಿಸಲು ಅವರು ಶ್ರಮಿಸಿದ್ದನ್ನು ಸ್ಮರಿಸಿದರು.

“ರಾಜೀವ್ ಗಾಂಧಿ ಅವರು ಪ್ರಾಮಾಣಿಕತೆ, ಆಧುನಿಕತೆ ಮತ್ತು ನವ ಭಾರತದ ಕನಸಿನ ಪ್ರತೀಕವಾಗಿದ್ದರೆ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತರ ಧ್ವನಿಯ ಪ್ರತೀಕವಾಗಿದ್ದಾರೆ. ಈ ಇಬ್ಬರು ಮಹಾನ್ ನಾಯಕರ ಆದರ್ಶಗಳು ಜನಸೇವೆಯ ದಾರಿಯಲ್ಲಿ ನಮಗೆ ಸದಾ ಕಾಲ ಮಾರ್ಗದರ್ಶನ ನೀಡುತ್ತವೆ” ಎಂದು ಅವರು ನುಡಿದರು. ಇಂದಿನ ರಾಜಕೀಯ ವಲಯದಲ್ಲಿ ಅಧಿಕಾರಕ್ಕಿಂತ ಜನಸೇವೆಗೆ, ವಿಭಜನೆಗಿಂತ ಸೌಹಾರ್ದತೆಗೆ ಹಾಗೂ ಅಸಮಾನತೆಗಿಂತ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ ಅವರು, ಈ ನಾಯಕರ ಆಶಯಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಪೂಜಾರಿ ವಿಶೇಷವಾಗಿ ಮಾತನಾಡಿದರು.

 ಕಾಂಗ್ರೆಸ್  ಸಕ್ರಿಯ ಕಾರ್ಯಕರ್ತ ದಿವಂಗತ ಲಕ್ಷ್ಮಣ್ ಶೆಟ್ಟಿಯವರಿಗೆ ಸಂತಾಪ ಸೂಚನೆ 

 ಸಭೆಯಲ್ಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ದಿವಂಗತ ಲಕ್ಷ್ಮಣ್ ಶೆಟ್ಟಿ ಅವರಿಗೆ ಸಂತಾಪ ಸೂಚಿಸಲಾಯಿತು.

ಶುಭೋದಯ ಆಳ್ವಾ ಸ್ವಾಗತಿಸಿದರೆ, ಮಾಜಿ ಮೇಯರ್ ಶಶಿದರ್ ಹೆಗ್ಡೆ ವಂದಿಸಿದರು. ಈ ಸಭೆಯಲ್ಲಿ ಜೋಕಿಂಮ್ ಡಿ ಸೌಝ, ವಿಕಾಶ್ ಶೆಟ್ಟಿ, ಅಬ್ದುಲ್ ರವೂಫ್, ಗೀತಾ ಅತ್ತಾವರ, ಶೈಲಾ ರಾಜೇಶ್, ಮಂಜುಳಾ ನಾಯಕ್, ನವೀನ್ ಡಿ ಸೌಝ, ಜಯಶೀಲಾ ಅಡ್ಯಾಂತಯ, ಲುಕ್ಮನ್ ಬಂಟ್ವಾಳ, ಜೆ ಅಬ್ದುಲ್ ಸಲೀಮ್, ಪದ್ಮನಾಬ ರೈ, ಸುಹಾನ್ ಆಳ್ವಾ, ಬೇಬಿ ಕುಂದರ್, ಟಿ ಕೆ ಸುಧೀರ್, ಸಾರಿಕಾ ಪೂಜಾರಿ, ಟಿ ಹೊನ್ನಯ್ಯ, ಡಿ ಕೆ ಅಶೋಕ್, ಸಬೀರ್ ಎಸ್, ಚಂದ್ರಕಲಾ ಜೋಗಿ, ಸುರೇಶ ಪೂಜಾರಿ, ಸಮರ್ಥ್ ಭಟ್, ನ್ಯಾನ್ಸಿ ನೋರನೋ, ಸೌಹಾನ್ ಎಸ್ ಕೆ, ದುರ್ಗಾ ಪ್ರಸಾದ್, ಚಂದ್ರಕಲಾ ರಾವ್ ಹಾಗೂ ಪ್ರಶಾಂತ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!