BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಸುರತ್ಕಲ್ ಅಭೀಶ್ ಮಾಲ್‌ನಲ್ಲಿ ಎಸ್‌ಕೆಎಸ್‌ ಲಾ ಫರ್ಮ್‌ ಸುಸಜ್ಜಿತ ಕಚೇರಿ ಉದ್ಘಾಟನೆ



ಮಂಗಳೂರು, ಆಗಸ್ಟ್30: ಎಸ್‌ಕೆಎಸ್‌ ಲಾ ಫರ್ಮ್‌ ಸುಸಜ್ಜಿತ ಕಚೇರಿಯನ್ನು ಸುರತ್ಕಲ್‌ನ ಅಭೀಶ್‌ ಮಾಲ್‌ನಲ್ಲಿ ಉದ್ಘಾಟಿಸಲಾಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ. ಭರತ್‌ ಶೆಟ್ಟಿ ಮತ್ತು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇನವ ಕಚೇರಿಯನ್ನು ಉದ್ಘಾಟಿಸಿದರು.

ದೀಪ ಪ್ರಜ್ವಲಿಸಿ ಮಾತನಾಡಿದ ಶಾಸಕ ಭರತ್‌ ಶೆಟ್ಟಿ, ಕ್ಷಿಪ್ರ ನ್ಯಾಯದಾನದಲ್ಲಿ ವಕೀಲರ ಪಾತ್ರ ಮಹತ್ವದ್ದು, ವಕೀಲರ ಸಕ್ರಿಯ ತೊಡಗಿಸಿಕೊಳ್ಳುವಿಕೆಯಿಂದ ನ್ಯಾಯದಾನ ಸುಲಲಿತವಾಗಿ ನಡೆಯುತ್ತದೆ ಎಂದರು. 

ಕಚೇರಿಯನ್ನು ಉದ್ಘಾಟಿಸಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ, ಸುರತ್ಕಲ್‌ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಈ ಕಚೇರಿಯಿಂದ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಹಿರಿಯ ವಕೀಲರಾದ ಪುಷ್ಪಲತಾ ಯು.ಕೆ., ರಾಜೇಶ್ ಕುಮಾರ್ ಅಮ್ಟಾಡಿ, 'ಕಜ್ಜ' ಖ್ಯಾತಿಯ ಚಲನಚಿತ್ರ ನಟ ಗೌತಮ್ ಬಂಗೇರ, ನಿಕಟಪೂರ್ವ ಕಾರ್ಪೊರೇಟರ್ ವಜ್ರಾಕ್ಷಿ ಶೆಟ್ಟಿ, ಉದ್ಯಮಿ ದಯಾನಂದ ಬಿ. ಶೆಟ್ಟಿ ಮೊದಲಾದವರು ಶುಭ ಹಾರೈಸಿದರು.

ವಕೀಲರಾದ ಶಕುಂತಳಾ ಕೆ. ಶೆಟ್ಟಿ, ಸುಕೇಶ್ ಕುಮಾರ್ ಶೆಟ್ಟಿ, ದಿನಕರ್ ಶೆಟ್ಟಿ, ಮೈನಾ ಶೆಟ್ಟಿ, ಸುಮಿತ್ರಾ ಶೆಟ್ಟಿ ಮತ್ತು ನಿವೃತ್ತ ಸರ್ಕಾರಿ ಅಭಿಯೋಜಕರಾದ ಶೇಖರ್ ಶೆಟ್ಟಿ

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!