BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru Tibetans Protest ಮಂಗಳೂರಿನಲ್ಲಿ ಟೆಬೆಟಿಯನ್ನರಿಂದ ಪ್ರತಿಭಟನೆ: ಚೀನದಿಂದ ನಿರಂತರವಾಗಿ ನಡೆಯುವ ದೌರ್ಜನ್ಯ ಮಾನವ ಹಕ್ಕುಗಳ ಉಲ್ಲಂಘನೆಗೆ ಖಂಡನೆ



ಮಂಗಳೂರು,ಆಗಸ್ಟ್ 16 : ಟಿಬೆಟ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಚೀನಾದ ದಬ್ಬಾಳಿಕೆಯನ್ನು ವಿರೋಧಿಸಿ ಭಾರತದ ವಿವಿಧ ಭಾಗಗಳಲ್ಲಿ ಟಿಬೆಟಿಯನ್ನರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಟಿಬೆಟ್‌ನಲ್ಲಿ ಚೀನಾದಿಂದ ನಡೆಯುತ್ತಿರುವ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದೌರ್ಜನ್ಯಗಳನ್ನು ಖಂಡಿಸಿ ಮಂಗಳೂರಿನಲ್ಲಿ ಟೆಬೆಟಿಯನ್ ಸಮುದಾಯದವರಿಂದ ಭಾನುವಾರ  ಪ್ರತಿಭಟನೆ ನಡೆಸಲಾಯಿತು. ಟಿಬೆಟಿಯನ್ನರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸಿ ಮತ್ತು ವಿಶ್ವದ ಗಮನ ಸೆಳೆಯಲು ಈ  ಜಾಥಾ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯಿಂದ ಹಂಪನಾಕಟ್ಟ ಕ್ಲಾಕ್ ಟವರ್ ವರೆಗೆ ನಡೆದ ಈ ಪ್ರತಿಭಟನಾ ಜಾಥಾದಲ್ಲಿ ಯಾವುದೇ ಘೋಷಣೆಗಳನ್ನು ಕೂಗದೆ, ಕಪ್ಪು ಪಟ್ಟಿ ಧರಿಸಿ ಮತ್ತು ಫಲಕಗಳನ್ನು ಹಿಡಿಯುವ ಮೂಲಕ ಶಾಂತಿಯುತವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.  ಟಿಬೆಟಿಯನ್ನರಿಗೆ ಸ್ವಾತಂತ್ರ್ಯ ಹಾಗೂ ಮೂಲಭೂತ ಮಾನವ ಹಕ್ಕುಗಳನ್ನು ನೀಡಬೇಕು ಎಂದು ಈ ವೇಳೆ ಒತ್ತಾಯಿಸಲಾಯಿತು.

 ಈ ಸಂದರ್ಭ ಮಾತನಾಡಿದ ಟಿಬೆಟ್ ಸಮುದಾಯದ ನಾಯಕರು ಚೀನಾ ಸರ್ಕಾರ ಜಾರಿಗೆ ತಂದಿರುವ 'ಎತ್ನಿಕ್ ಯೂನಿಟಿ ಅಂಡ್ ಪ್ರೋಗ್ರೆಸ್ ಲಾ' (Ethnic Unity and Progress Law) ಅನ್ನು ಪ್ರಬಲವಾಗಿ ವಿರೋಧಿಸುತ್ತೇವೆ.  ಈ ಕಾನೂನು ಟಿಬೆಟಿಯನ್ ಸಂಸ್ಕೃತಿ ಮತ್ತು ಭಾಷೆಯ ಮೇಲೆ ಪ್ರಭಾವ ಬೀರಿ, ಮ್ಯಾಂಡರಿನ್ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ . ಚೀನಾ ಸರ್ಕಾರ ಟಿಬೆಟ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಶಿಕ್ಷಣ ಮತ್ತು ಭಾಷಾ ಹಕ್ಕುಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

https://youtu.be/fi-Ui5_lv44

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!