BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru H1N1and Maleria cases Raised in Dakshina Kannada ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್‌1ಎನ್‌1 ಹಾಗೂ ಮಲೇರಿಯಾ ಆತಂಕ: ಆರೋಗ್ಯ ಇಲಾಖೆಯಿಂದ ತೀವ್ರ ಮುನ್ನೆಚ್ಚರಿಕೆ..!


ಮಂಗಳೂರು,ಆಗಸ್ಟ್ 28: ಋತುಮಾನದ ಬದಲಾವಣೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್‌1ಎನ್‌1 ಸೇರಿದಂತೆ ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

ಸೋಂಕು ಹರಡುವಿಕೆ ಹಾಗೂ ಲಕ್ಷಣಗಳು:

ಚಳಿ ಹಾಗೂ ಮಳೆಯ ವಾತಾವರಣದಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ನಿಕಟ ಸಂಪರ್ಕದಲ್ಲಿದ್ದಾಗ ಶ್ವಾಸಕೋಶದ ಹನಿಗಳ ಮೂಲಕ ಈ ಸೋಂಕು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಈ ವೈರಸ್ ವೇಗವಾಗಿ ಹರಡುವ ಸಾಧ್ಯತೆಯಿರುತ್ತದೆ.

2026ರ ಜನವರಿ 1ರಿಂದ ಆಗಸ್ಟ್ 25ರವರೆಗೆ ಜಿಲ್ಲೆಯಲ್ಲಿ ಒಟ್ಟು 87 ಪ್ರಕರಣಗಳು ದಾಖಲಾಗಿವೆ.  2025ರ ಜನವರಿ-ಆಗಸ್ಟ್ ಅವಧಿಯಲ್ಲಿ 71 ಪ್ರಕರಣಗಳು, 2025ರ ಇಡೀ ವರ್ಷದಲ್ಲಿ 207 ಪ್ರಕರಣಗಳು ಹಾಗೂ 2024ರಲ್ಲಿ 208 ಪ್ರಕರಣಗಳು ವರದಿಯಾಗಿದ್ದವು.

ವೈದ್ಯಕೀಯ ಸಿದ್ಧತೆ ಹಾಗೂ ಲಭ್ಯವಿರುವ ಸಾಮಗ್ರಿಗಳು:

ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು ಮತ್ತು ರಕ್ಷಣಾ ಸಾಮಗ್ರಿಗಳ ಲಭ್ಯತೆ ಇದೆ. 1,749 ಹಾಗೂ 100 ಒಟ್ಟು ಓಸೆಲ್ಟಾಮಿವಿರ್ ಮಾತ್ರೆಗಳು ಮತ್ತು ಮಕ್ಕಳಿಗಾಗಿ 34 ಸಿರಪ್ ಬಾಟಲಿಗಳು ಲಭ್ಯವಿವೆ. ಇದರೊಂದಿಗೆ 738 ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಾ ಕಿಟ್‌ಗಳು, 3,616 N95 ಮಾಸ್ಕ್‌ಗಳು ಮತ್ತು 4,204 PPE ಕಿಟ್‌ಗಳು ಸಿದ್ಧವಾಗಿವೆ.

ಯಾರು ಎಚ್ಚರಿಕೆ ವಹಿಸಬೇಕು?

ಚಿಕ್ಕ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಕ್ಯಾನ್ಸರ್ ರೋಗಿಗಳು, ಡಯಾಲಿಸಿಸ್‌ಗೆ ಒಳಗಾಗುವವರು ಹಾಗೂ ಅಸಂಯೋಜಿತ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು.

ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಗಳನ್ನು ನೇರವಾಗಿ ಫಾರ್ಮಸಿಗಳಿಂದ ಸೇವಿಸಬಾರದು. ಜ್ವರ, ಶೀತ, ಕೆಮ್ಮು ಅಥವಾ ಗಂಟಲು ಕಿರಿಕಿರಿ ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಜ್ಯ ಕಾರ್ಮಿಕರಲ್ಲಿ ಮಲೇರಿಯಾ ಆತಂಕ: ಆರೋಗ್ಯ ಇಲಾಖೆಯಿಂದ ತೀವ್ರ ತಪಾಸಣೆ; ಡಾ. ನವೀನ್ ಚಂದ್ರ ಕುಲಾಲ್

ಅಂತಾರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಮಲೇರಿಯಾ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ  ಪ್ರಸಕ್ತ ವರ್ಷದಲ್ಲಿ ಇತರ ರಾಜ್ಯಗಳಿಂದ ಬಂದವರಲ್ಲಿ ಒಟ್ಟು 48 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ.ಇನ್ನು 2025ರಲ್ಲಿ ಒಟ್ಟು 108 ಹಾಗೂ 2024ರಲ್ಲಿ 168 ಪ್ರಕರಣಗಳು ದಾಖಲಾಗಿದ್ದವು. 

ಆರೋಗ್ಯ ಇಲಾಖೆಯ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ:

ನಿರ್ಮಾಣ ಹಂತದ ಕಟ್ಟಡಗಳ ಸ್ಥಳಗಳಿಗೆ ಆರೋಗ್ಯ ತಂಡಗಳು ನೇರವಾಗಿ ಭೇಟಿ ನೀಡುತ್ತಿವೆ.ಅಲ್ಲಿ ಕಾರ್ಮಿಕರನ್ನು ಗುರುತಿಸಿ ಸ್ಥಳದಲ್ಲೇ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಸಾರ್ವಜನಿಕರಿಗೆ ಯಾವುದೇ ಜ್ವರ ಕಾಣಿಸಿಕೊಂಡ ತಕ್ಷಣವೇ ಮೊದಲು ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

https://youtu.be/gesZ7X_Azfc

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!