ಮಂಗಳೂರು, ಆಗಸ್ಟ್ 25 :ನಬಿಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1501ನೇ ಮೀಲಾದುನ್ನಬೀ (ಸ) ಪ್ರಯುಕ್ತ ಮಂಗಳೂರಿನ ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ, ಫೈಸಲ್ ನಗರ ನಮಾಉಲ್ ಇಸ್ಲಾಂ ಮದ್ರಸ ಹಾಗೂ ಶಾಂತಿನಗರ ತರ್ಬಿಯತುಲ್ ಇಸ್ಲಾಂ ಕಮಿಟಿ ಇವುಗಳ ಜಂಟಿ ಆಶ್ರಯದಲ್ಲಿ ವಿಜೃಂಭಣೆಯ ಮೀಲಾದ್ ರ‍್ಯಾಲಿ ನಡೆಯಿತು.
ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆಗೈದರು. ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರವೂಫ್ ಅವರು ಧ್ವಜಾರೋಹಣ ನೆರವೇರಿಸಿ ರ್ಯಾಲಿಗೆ ಚಾಲನೆ ನೀಡಿದರು. ಹಯಾತುಲ್ ಇಸ್ಲಾಂ ಮದ್ರಸ ವಠಾರದಿಂದ ಆರಂಭಗೊಂಡ ರ್ಯಾಲಿಯು ಫೈಸಲ್ ನಗರ, ಶಾಂತಿನಗರ ಹಾಗೂ ಪಾಂಡೇಲ್ ಮಾರ್ಗವಾಗಿ ಸಾಗಿತು. ರ್ಯಾಲಿಯಲ್ಲಿ ದಫ್ ಪ್ರದರ್ಶನ, ಸ್ಕೌಟ್ ಹಾಗೂ ಆಕರ್ಷಕ ಫ್ಲವರ್ ಶೋ ವಿಶೇಷ ಮೆರುಗು ನೀಡಿತು. ಪಾಲ್ಗೊಂಡ ಎಲ್ಲರಿಗೂ ಸಿಹಿ ತಿಂಡಿ ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು. ಅಂತಿಮವಾಗಿ ದುಆ ಹಾಗೂ ಪ್ರಾರ್ಥನೆಯೊಂದಿಗೆ ರ್ಯಾಲಿಯು ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಹಕೀಂ ಮದನಿ, ಗೌಸಿಯಾ ಜುಮಾ ಮಸೀದಿ ಖತೀಬ್ ಇಕ್ಬಾಲ್ ನಿಝಾಮಿ, ತರ್ಬಿಯತುಲ್ ಇಸ್ಲಾಂ ಕಮಿಟಿ ಇಮಾಮ್ ಮಿಖ್ದಾದ್ ಹಾಶಿಮಿ ಉಪಸ್ಥಿತರಿದ್ದರು.
ಹಾಗೆಯೇ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ, ಉಪಾಧ್ಯಕ್ಷ ಅಶ್ರಫ್ ಕರಿಬೊಟ್ಪು, ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ ಕಾರ್ಯದರ್ಶಿ ಪೊಡಿಯಾಕ, ಕೋಶಾಧಿಕಾರಿ ನಝೀರ್ ಪಾಂಡೇಲ್, ಉಸ್ತುವಾರಿಗಳಾದ ನಝೀರ್ ಬಜಾಲ್, ಅಶ್ರಫ್ ತೋಟ, ಗೌಸಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಬದ್ರಿಯಾ ಮಸೀದಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕೆಳಗಿನ ಮನೆ, ಸದಸ್ಯರಾದ ಇಕ್ಬಾಲ್ ಅಹ್ಸನಿ, ಯೂಸುಫ್ ಕುಂಬ್ಳಲಿಕೆ ಸೇರಿದಂತೆ ವಿವಿಧ ಮದ್ರಸಾಗಳ ಅಧ್ಯಕ್ಷರು ಹಾಗೂ ಊರಿನ ಪ್ರಮುಖ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.