ಮಂಗಳೂರು, ಆಗಸ್ಟ್ 14 : ಮಂಗಳೂರು ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 79 ನೇ ವರ್ಷದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಂಡಿತು. ಐದು ದಿನಗಳ ಪರ್ಯಂತ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು ವಿವಿಧ ಧಾರ್ಮಿಕ , ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿರುವುದು .
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಮಾನ್ಯ ಸಂಘಚಾಲಕ್ ಡಾ . ಸತೀಶ್ ರಾವ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕರಾದ ಶ್ರೀ ಸುರೇಶ್ ಜಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀ ಕೆ . ರಘುವೀರ್ ಕಾಮತ್ , ಕಾರ್ಯದರ್ಶಿ ಗಜಾನನ ಪೈ , ಸೇವಾ ಭಾರತಿ ಪ್ರಮುಖ ವಿನೋದ್ ಶೆಣೈ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಆನಂದ ಪಾಂಗಳ , ಶ್ರೀ ಕೆ . ಪದ್ಮನಾಭ , ಸ್ಮಿತಾ ಎಂ , ಪ್ರಧಾನ ಕಾರ್ಯದರ್ಶಿ ಜಿ . ಸುರೇಶ್ ವಿ . ಕಾಮತ್ , ಕೋಶಾಧಿಕಾರಿ ರಂಗನಾಥ್ ಹಾಗೂ ಜೊತೆ ಕಾರ್ಯದರ್ಶಿಗಳಾದ ನಂದನ್ ಮಲ್ಯ , ಜೀವನರಾಜ್ ಶೆಣೈ , ಗಣೇಶ್ ಪ್ರಸಾದ್ ಹಾಗೂ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು .