BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangalurh ತಂಗಿಯ ಸಾವಿನಿಂದ ಮನನೊಂದು ಅಣ್ಣ ಕೂಡ ಜೀವಾಂತ್ಯ..ಮಂಗಳೂರಿನಲ್ಲೊಂದು ಮನ ಕಲುಕುವ ಘಟನೆ..!


ಮಂಗಳೂರು, ಆಗಸ್ಟ್ 11 : ನೀಟ್ ವಿಚಾರದಲ್ಲಿ ಇತ್ತೀಚೆಗಷ್ಟೇ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 19 ವರ್ಷದ ಅಯಿಜಾ ಆರ್ ಮಹೇಶ್  ಎಂಬಾಕೆಯ ಸಹೋದರ ಅರ್ಜುನ್ ಮಹೇಶ್ 24  ಮಂಗಳೂರಿನಲ್ಲಿ ಜೀವಾಂತ್ಯ ಮಾಡಿಕೊಂಡಿದ್ದಾರೆ. ತಂಗಿಯ ಸಾವಿನಿಂದ ಮನನೊಂದು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.  ಮೂಲತಃ ಕಾಸರಗೋಡು ಜಿಲ್ಲೆಯ ಮುಕ್ಕೂಡು ನಿವಾಸಿಯಾಗಿರುವ ಅರ್ಜುನ್, ದುಬೈನಲ್ಲಿ ಆಟೋಮೊಬೈಲ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಬಜ್ಪೆ ಠಾಣೆ ವ್ಯಾಪ್ತಿಯ ಮರವೂರಿನಲ್ಲಿರುವ ಹೋಟೆಲ್​ವೊಂದರಲ್ಲಿ ತಂಗಿದ್ದರು. ಹೋಟೆಲ್‌ ಕೊಠಡಿಯಲ್ಲಿ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು‌ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್​ ಪತ್ತೆಯಾಗಿಲ್ಲ. ಆದರೆ, ಸಣ್ಣ ಚೀಟಿಯೊಂದರಲ್ಲಿ "ಅಮ್ಮಾ, ಐ ಆಮ್ ಸಾರಿ"  ಎಂದು ಬರೆದು, ತಮ್ಮ ಇಬ್ಬರು ಆಪ್ತ ಸ್ನೇಹಿತರಿಗೆ ಮಾಹಿತಿ ನೀಡುವಂತೆ ನಮೂದಿಸಿದ್ದಾರೆ ಎಂದು‌ ಕಮಿಷನರ್ ರೆಡ್ಡಿ ತಿಳಿಸಿದ್ದಾರೆ.

ಘಟನೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಬಜ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅರ್ಜುನ್, ಸಾವಿಗೆ ಒಂದು ದಿನ ಮೊದಲು ಶಾರ್ಜಾದಿಂದ ಮಂಗಳೂರಿಗೆ ಬಂದಿದ್ದರು. ಕುಟುಂಬ ಸದಸ್ಯರು ಪದೇ ಪದೇ ಪ್ರಯತ್ನಿಸಿದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ತಂಗಿಯ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಮರಣೋತ್ತರ ಪರೀಕ್ಷೆಯ ನಂತರ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಪಲ್ಲಿಕ್ಕರ ಪಂಚಾಯತ್ ಸದಸ್ಯೆ ಸೌಮಿನಿ ರಾಮಕೃಷ್ಣನ್ ಮಾತನಾಡಿ, ''ಕುಟುಂಬವು ಈಗಾಗಲೇ ಅಯಿಜಾ ಅವರ ಸಾವಿನಿಂದ ನೋವಿನಲ್ಲಿತ್ತು. ಇದೀಗ ಅರ್ಜುನ್ ಸಾವು ಕೂಡ ಬೇಸರ ತರಿಸಿದೆ'' ಎಂದು ನೋವು ತೋಡಿಕೊಂಡಿದ್ದಾರೆ.

ಕಳೆದ  ತಿಂಗಳಿನಲ್ಲಿ ಪಾಲದ ಚೆರ್ಪುಂಕಲ್‌ನಲ್ಲಿರುವ ಖಾಸಗಿ ನೀಟ್ ತರಬೇತಿ ಕೇಂದ್ರಕ್ಕೆ ಸಂಬಂಧಿಸಿದ ಹಾಸ್ಟೆಲ್‌ನಲ್ಲಿ ಅರ್ಜುನ್ ತಂಗಿ ಅಯಿಜಾ ಜೀವಾಂತ್ಯ  ಮಾಡಿಕೊಂಡಿದ್ದಳು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ಬಳಿಕ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಮಾನಸಿಕ ಒತ್ತಡದಿಂದ ಸಾವಿಗೆ ಶರಣಾಗಿದ್ದರು ಎನ್ನಲಾಗಿತ್ತು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!