ಮಡಿಕೇರಿ : ಸುಮಾರು 30 ವರ್ಷ ವಯಸ್ಸಿನ ಗಂಡು ಕಾಡಾನೆಯೊಂದು ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಆಹಾರ ಅರಸಿ ಮಂಗಳವಾರ ರಾತ್ರಿ ಕಾಫಿ ತೋಟವನ್ನು ಪ್ರವೇಶಿಸಿದ ಕಾಡಾನೆ ತೋಟದಲ್ಲಿದ್ದ ವಿದ್ಯುತ್ ಕಂಬವನ್ನು ಗುದ್ದಿದೆ. ಈ ಸಂದರ್ಭ ಕಂಬ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ವೈದ್ಯಾಧಿಕಾರಿ ಡಾ.ಮುಜೀಬ್ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಸಿಎಫ್ ಸೋನಲ್ ವೃಷ್ಠಿ, ಡಿಎಫ್‍ಓ ಕಿರುಬ ನಂದನ್, ಎಸಿಎಫ್ ಮಂಜುನಾಥ್, ಆರ್‌ಎಫ್‍ಓ ರಾಕೇಶ್, ಗಂಗಾಧರ್, ಎಆರ್‍ಎಫ್‍ಓ ಪ್ರಶಾಂತ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
[ಹೋಮ್] ರಾಜ್ಯ
ರಾಜ್ಯ
[ಹೋಮ್] ದೇಶ
ದೇಶ
[ಹೋಮ್] ವಿದೇಶ
ವಿದೇಶ
[ಹೋಮ್] ಕ್ರೀಡೆ
ಕ್ರೀಡೆ
[ಹೋಮ್] ಸಿನಿಮಾ
ಸಿನಿಮಾ
[ಹೋಮ್] ಉಡುಪಿ
ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ
[ಹೋಮ್] ತಿಂಗಳ ಪಾಪ್ಯುಲರ್ ಸುದ್ದಿಗಳು