BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

leopard captured in Mangaluru ಮಂಗಳೂರು ಎಡಪದವಿನಲ್ಲಿ ಸಾಕು ನಾಯಿಯನ್ನು ಬೇಟೆಯಾಡಿ ಜನರ ನಿದ್ದೆ ಕೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ


ಮಂಗಳೂರು, ಆಗಸ್ಟ್ 31:   ಮಂಗಳೂರು ಹೊರವಲಯದ ಎಡಪದವಿನಲ್ಲಿ ಸಾಕು ನಾಯಿಯನ್ನು ಬೇಟೆಯಾಡಿ  ಜನರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.

ಮನೆಯ ಸಾಕು ನಾಯಿಯನ್ನು ಬೇಟೆಯಾಡಿ ಎಡಪದವಿನ ನಲ್ಯ ಸೀತಾಂಬೆಟ್ಟು ಪ್ರದೇಶದಲ್ಲಿ ಈ ಚಿರತೆ ತೀವ್ರ ಆತಂಕ ಸೃಷ್ಟಿಸಿತ್ತು. ಇದೀಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಯಶಸ್ವಿಯಾಗಿ ಸಿಕ್ಕಿಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಸೀತಾಂಬೆಟ್ಟು ಸೇರಿದಂತೆ ಎಡಪದವಿನ ವಿವಿಧ ಪ್ರದೇಶಗಳಲ್ಲಿ ಚಿರತೆಯ ಓಡಾಟ ನಿರಂತರವಾಗಿ ಕಂಡುಬಂದಿತ್ತು. ಚಿರತೆಯು ರಾತ್ರಿ ವೇಳೆ ನಾಯಿಗಳು ಹಾಗೂ ಜಾನುವಾರುಗಳನ್ನು ಬೇಟೆಯಾಡುತ್ತಿದ್ದು, ಇದರಿಂದ ಭಯಭೀತರಾದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ನಾಯಿ ಮೇಲೆ ದಾಳಿ:

ಶನಿವಾರ ರಾತ್ರಿ ಸೀತಾಂಬೆಟ್ಟಿನ ಲೋಕೇಶ್ ಎಂಬುವವರಿಗೆ ಸೇರಿದ ಸಾಕು ನಾಯಿಯನ್ನು ಚಿರತೆ ಭೇಟೆಯಾಡಿ ಕೊಂದು ಹಾಕಿತ್ತು. ಈ ಆಘಾತಕಾರಿ ಘಟನೆಯ ಬಳಿಕ ಸ್ಥಳೀಯರು ಮತ್ತೊಮ್ಮೆ ಅರಣ್ಯ ಇಲಾಖೆಗೆ ತುರ್ತು ದೂರು ಸಲ್ಲಿಸಿ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿದ್ದರು.

ಬೋನಿಗೆ ಬಿದ್ದ ಚಿರತೆ:

ಸಾರ್ವಜನಿಕರ ಆತಂಕಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಚಿರತೆಯ ಓಡಾಟ ಹೆಚ್ಚಿದ್ದ ಸೀತಾಂಬೆಟ್ಟು ಸಮೀಪದ ಸ್ಥಳದಲ್ಲಿ ಬೋನನ್ನು ಅಳವಡಿಸಿದ್ದರು. ಶನಿವಾರ ರಾತ್ರಿ ಇರಿಸಲಾಗಿದ್ದ ಬೋನಿಗೆ ಭಾನುವಾರ ಚಿರತೆ ಬಿದ್ದು ಸೆರೆಯಾಗಿದೆ. ಚಿರತೆ ಸೆರೆ ಸಿಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದು, ಹಲವು ದಿನಗಳಿಂದ ಮನೆ ಮಾಡಿದ್ದ ಭೀತಿ ದೂರವಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!